ಧಾರ್ಮಿಕ ಶಿಕ್ಷಣದಿಂದ ಜ್ಞಾನ ಅಭಿವೃದ್ಧಿ: ಅಶ್ರಫ್ ರಹ್ಮಾನಿ ಚೌಕಿ
ಕುಂಬಳೆ ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿಯ ಪ್ರಚಾರ ಸಮ್ಮೇಳನ

ಉಳ್ಳಾಲ : ಧಾರ್ಮಿಕ ಶಿಕ್ಷಣ ಕೇಂದ್ರ ಬೆಳೆದರೆ ಮಾತ್ರ ಜನರಲ್ಲಿ ಜ್ಞಾನ ಅಭಿವೃದ್ಧಿ ಹೊಂದಲು ಸಾಧ್ಯ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕಾಲೇಜು ಸ್ಥಾಪನೆ ಮಾಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಎಲ್ಲರು ಒತ್ತು ನೀಡಿ ಪ್ರೋತ್ಸಾಹ ಸಹಕಾರ ನೀಡಬೇಕಾದ್ದು ಅಗತ್ಯ ಎಂದು ಅಶ್ರಫ್ ರಹ್ಮಾನಿ ಚೌಕಿ ಹೇಳಿದರು.
ಅವರು ಕಿನ್ಯ ಸಿಎಚ್ ನಗರದಲ್ಲಿ ಪೆರಾಳ್ ಹಳೇ ವಿದ್ಯಾರ್ಥಿಗಳು ಮತ್ತು ಎಸ್ ವೈ ಎಸ್ ಕಿನ್ಯ ಇದರ ಆಶ್ರಯದಲ್ಲಿ ಮಜ್ಲಿಸ್‍ನ್ನೂರು ಹಾಗೂ ಕುಂಬಳೆ ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ ಯು ವಾರ್ಷಿಕ ಸಮ್ಮೇಳನ ಪ್ರಯುಕ್ತ ಗುರುವಾರ ನಡೆದ ಪ್ರಚಾರ ಸಮ್ಮೇಳನ ದಲ್ಲಿ ಮಾತನಾಡಿದರು.
ಪೆರಾಳ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಿನ್ಯ ಕೇಂದ್ರ ಜುಮಾ ಮಸೀದಿ ಯ ಸಹಾಯಕ ಮುದರ್ರಿಸ್ ಶಾಹುಲ್ ಹಮೀದ್ ದಾರಿಮಿ ಉದ್ಘಾಟಿಸಿದರು. ಸಯ್ಯದ್ ಅಮೀರ್ ತಂಙಳ್ ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅಮೀರ್ ತಂಙಳ್, ಅಶ್ರಫ್ ರಹ್ಮಾನಿ, ಅಬ್ದುಲ್ ರಹಿಮಾನ್ ,ಪತ್ತಾಹ್ ಫೈಝಿ ಅಶ್ರಫ್ ಫೈಝಿ,ಕೆ.ಸಿ. ಇಸ್ಮಾಯಿಲ್ ಹಾಜಿ, ಸಿತಾರ್ ಮಜೀದ್ ಹಾಜಿ, ಸಿರಾಜ್ ಕಿನ್ಯ, ಫಾರೂಕ್ ಕಿನ್ಯ, ಅಬೂಸಾಲಿ ಹಾಜಿ, ಹಮೀದ್ ಕಿನ್ಯ, ಪುತ್ತು ಹಾಜಿ , ಅಬ್ದುಲ್ ರಹಿಮಾನ್ ದಾರಿಮಿ, ಬಾವ ಹಾಜಿ, ಸಲಾಂ ಫೈಝಿ, ನಾಸಿರ್ ದಾರಿಮಿ, ಇಬ್ರಾಹಿಂ ಫೈಝಿ, ಫೈಸಲ್ ದಾರಿಮಿ , ಹಾರೀಸ್ ದಾರಿಮಿ ಉಪಸ್ಥಿತರಿದ್ದರು.
ಮುಸ್ತಫಾ ಫೈಝಿ ಕಿನ್ಯ ಸ್ವಾಗತಿಸಿದರು.







