'70ರಲ್ಲಿ 61 ಶಾಸಕರ ಬಳಿ ಜನ್ಮ ಪ್ರಮಾಣಪತ್ರವಿಲ್ಲ': ಎನ್ ಪಿಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ದಿಲ್ಲಿ ವಿಧಾನಸಭೆ

ಹೊಸದಿಲ್ಲಿ: ಜನನ ಪ್ರಮಾಣ ಪತ್ರವಿದೆಯೇ ಎಂದು ಪ್ರಶ್ನಿಸಿದ್ದಕ್ಕೆ 70ರಲ್ಲಿ 61 ಶಾಸಕರು 'ಇಲ್ಲ' ಎಂದು ಉತ್ತರಿಸಿದ್ದಾರೆ ಎಂದಿರುವ ದಿಲ್ಲಿ ವಿಧಾನಸಭೆ ಎನ್ ಪಿಆರ್, ಎನ್ ಆರ್ ಸಿ ವಿರುದ್ಧ ನಿರ್ಣಯ ಅಂಗೀಕರಿಸಿದೆ.
ಇದೊಂದು ಪ್ರಮುಖ ಸಂದೇಶವಾಗಿದ್ದು, ವಿಧಾನಸಭೆಯು ಎನ್ ಪಿಆರ್ ಅನ್ನು ಜಾರಿಗೊಳಿಸದೇ ಇರಲು ನಿರ್ಣಯ ಅಂಗೀಕರಿಸಿದೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಜನನ ಪ್ರಮಾಣ ಪತ್ರ ಇಲ್ಲದಿರುವ ಜನಪ್ರತಿನಿಧಿಗಳ ಪಟ್ಟಿಯಲ್ಲಿ ತಾನೂ ಇದ್ದೇನೆ ಎಂದು ಅವರು ಹೇಳಿದ್ದಾರೆ.
"ಪೌರತ್ವವನ್ನು ಸಾಬೀತುಪಡಿಸಲು ನನ್ನಲ್ಲಿ, ನನ್ನ ಪತ್ನಿಯಲ್ಲಿ, ನನ್ನ ಇಡೀ ಕ್ಯಾಬಿನೆಟ್ ನಲ್ಲಿ ಯಾರೊಬ್ಬರಲ್ಲೂ ಜನನ ಪ್ರಮಾಣ ಪತ್ರವಿಲ್ಲ. ನಮ್ಮನ್ನೂ ದಿಗ್ಬಂಧನ ಕೇಂದ್ರಕ್ಕೆ ಕಳುಹಿಸುತ್ತಾರೆಯೇ?" ಎಂದವರು ಪ್ರಶ್ನಿಸಿದರು.
Next Story





