'ನಾನಿಂದು ಸ್ವತಂತ್ರನಾಗಿದ್ದೇನೆ, ಆದರೆ...': ಗೃಹಬಂಧನದಿಂದ ಬಿಡುಗಡೆಯಾದ ಫಾರೂಕ್ ಅಬ್ದುಲ್ಲಾ ಮಾತು
ಹೊಸದಿಲ್ಲಿ: ಸುಮಾರು 7 ತಿಂಗಳಿನಿಂದ ಗೃಹಬಂಧನದಲ್ಲಿದ್ದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಇಂದು ಬಿಡುಗಡೆಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ಇಂದು ನನಗೆ ಮಾತನಾಡಲು ಪದಗಳಿಲ್ಲ. ನಾನಿಂದು ಸ್ವತಂತ್ರವಾಗಿದ್ದೇನೆ.. ಆದರೆ ಗೃಹಬಂಧನದಲ್ಲಿರುವ ಎಲ್ಲಾ ನಾಯಕರು ಬಿಡುಗಡೆಯಾಗುವವರೆಗೆ ಈ ಸ್ವಾತಂತ್ರ್ಯ ಸಂಪೂರ್ಣವಾಗಲಾರದು" ಎಂದವರು ಹೇಳಿದರು.
"ಉಳಿದವರೆಲ್ಲರೂ ಬಿಡುಗಡೆಯಾಗುವವರೆಗೆ ನಾನು ರಾಜಕೀಯ ವಿಷಯಗಳನ್ನು ಮಾತನಾಡುವುದಿಲ್ಲ. ನನ್ನ ಜನರು ಸ್ವತಂತ್ರಗೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ. ಈ ರಾಜ್ಯದ ಜನರು ಸ್ವತಂತ್ರರಾಗುತ್ತಾರೆ" ಎಂದವರು ಹೇಳಿದರು.
Next Story