ಕುಷ್ಠರೋಗದ ಬಗ್ಗೆ ಅರಿವು ಮೂಡಿಸಬೇಕು: ಡಾ.ಸುರೇಂದ್ರ ಚಿಂಬಾಲ್ಕರ್

ಉಡುಪಿ, ಮಾ.13: ಕುಷ್ಠರೋಗದ ಬಗ್ಗೆ ಜನರಲ್ಲಿ ಸೂಕ್ತ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಈ ರೋಗದ ಬಗ್ಗೆ ಇರುವ ಅಪನಂಬಿಕೆಗಳನ್ನು ದೂರಮಾಡಬೇಕು ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಾ.ಸುರೇಂದ್ರ ಚಿಂಬಾಲ್ಕರ್ ತಿಳಿಸಿದ್ದಾರೆ.
ಶುಕ್ರವಾರ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಡಾ.ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ರೆಡ್‌ಕ್ರಾಸ್ ಘಟಕ ಇವರ ಸಹಯೋಗದಲ್ಲಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಕುಷ್ಠ ರೋಗ ನಿವಾರಣಾ ದಿನಾಚರಣೆ ಮತ್ತು ಸ್ಪರ್ಶಕುಷ್ಠ ಅರಿವು ಅಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕುಷ್ಠರೋಗಕ್ಕೆ 1985ರವರೆಗೆ ಯಾವುದೇಚಿಕಿತ್ಸೆಯನ್ನು ಕಂಡು ಹಿಡಿದಿರಲಿಲ್ಲ. ಆದರೆ ಈಗ ಆ ಭಯ ಬೇಕಾಗಿಲ್ಲ. ಯಾವುದೇ ತೊಂದರೆ ಯಿಲ್ಲದೇ ಮುಕ್ತ ವಾಗಿ ವೈದ್ಯರಲ್ಲಿಗೆ ತೆರಳಿ, ಕುಷ್ಠರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯ ಬಹುದಾಗಿದೆ ಎಂದು ಡಾ. ಸುರೇಂದ್ರ ಚಿಂಬಾಲ್ಕರ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಯೂತ್ ರೆಡ್‌ಕ್ರಾಸ್‌ನ ವಿದ್ಯಾರ್ಥಿನಿ ಮೇಘಾಶ್ಯಾಮ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕಿ ಶೋಭಾ ಸ್ವಾಗತಿಸಿ, ದೀಕ್ಷಾ ವಂದಿಸಿದರು.







