ಉಡುಪಿ: ಆಟೋರಿಕ್ಷಾಗಳಲ್ಲಿ ವಲಯ ಸ್ಟಿಕ್ಕರ್ ಅಳವಡಿಕೆ ಕಡ್ಡಾಯ
ಉಡುಪಿ, ಮಾ.13: ಉಚ್ಛ ನ್ಯಾಯಾಲಯದ ಆದೇಶ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ನಿರ್ಣಯದಂತೆ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ತಾಲೂಕಿನ ಎಲ್ಲಾ ಆಟೋರಿಕ್ಷಾ ಚಾಲಕ / ಮಾಲಕರು ಜೂನ್ 30ರ ಒಳಗೆ ಆಟೋರಿಕ್ಷಾಗಳನ್ನು ಮೂಲ ದಾಖಲೆಗಳೊಂದಿಗೆ ಕಚೇರಿಗೆ ಹಾಜರುಪಡಿಸಿ ಕಡ್ಡಾಯವಾಗಿ ವಲಯ ಸ್ಟಿಕ್ಕರ್‌ಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ.ರಾಮಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





