ಉಡುಪಿ: ನೃತ್ಯ ನೀರಾಜನಮ್ ಉದ್ಘಾಟನೆ

ಉಡುಪಿ, ಮಾ.13: ಶ್ರೀಅದಮಾರು ಮಠದ ಪರ್ಯಾಯಾವಧಿಯಲ್ಲಿ ತಿಂಗಳ ಪ್ರತಿ ಶುಕ್ರವಾರ ನಡೆಯುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯ ನೀರಾಜನಮ್’ನ್ನು ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥರು ಹಾಗೂ ಪರ್ಯಾಯ ಪೀಠಾಧಿಪತಿ ಶ್ರೀಈಶಪ್ರಿಯ ತೀರ್ಥರು ಶ್ರೀ ಕೃಷ್ಣ ಮಠದ ಶ್ರೀನರಹರಿ ತೀರ್ಥ ವೇದಿಕೆ ರಾಜಾಂಗಣದಲ್ಲಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಉಡುಪಿ ವೃತ್ತ ಕಚೇರಿಯ ಸಹಾಯಕ ಮಹಾ ಪ್ರಬಂಧಕರಾದ ಗೋಪಾಲಕೃಷ್ಣ ಸಾಮಗ, ನಾಟ್ಯಾಚಾರ್ಯ ನಾರಾಯಣ ಭಟ್, ಕರಾವಳಿ ನೃತ್ಯ ಕಲಾಪರಿಷತ್ತಿನ ಕಮಲಾಕ್ಷ ಆಚಾರ್ಯ, ವಿದುಷಿ ಲಕ್ಷ್ಮೀ ಗುರುರಾಜ್ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾನ್ ವಿಜಯಸಿಂಹರು ಕಾರ್ಯಕ್ರಮ ನಿರ್ವಹಿಸಿ, ವೈ.ಎನ್.ರಾಮಚಂದ್ರ ರಾವ್ ವಂದಿಸಿದರು.
Next Story





