ಮಂಗಳೂರು : ಸಮಸ್ತ ಮದ್ರಸಗಳಿಗೆ ಮಾ.14 ರಿಂದ ರಜೆ
ಮಂಗಳೂರು : ಸಮಸ್ತ ಅಧೀನದ ಎಲ್ಲಾ ಮದ್ರಸಗಳಿಗೆ ಮಾ. 14ರಿಂದ ರಜೆ ಸಾರಲಾಗಿದೆ.
ಕೊರೊನ ವೈರಸ್ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಆದೇಶದಂತೆ ಮಾರ್ಚ್ 14 ರಿಂದ 23ರ ತನಕ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾ ಜಂ ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ
ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮತ್ತು ರಫೀಕ್ ಹಾಜಿ ಕೊಡಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





