ದೆಹಲಿ ಪಿಎಫ್‍ಐ ನಾಯಕರ ಬಂಧನ ವಿರೋಧ: ಪುತ್ತೂರಿನಲ್ಲಿ ಪಿಎಫ್‍ಐ ಪ್ರತಿಭಟನೆ

ಪುತ್ತೂರು : ದೆಹಲಿಯಲ್ಲಿ ಪಿಎಫ್‍ಐ ನಾಯಕರ ಮತ್ತು ಅಮಾಯಕ ಯುವಕರನ್ನು ಬಂಧನವನ್ನು ಖಂಡಿಸಿ ಪುತ್ತೂರು ಬಸ್ಸು ನಿಲ್ದಾಣದ ಸಮೀಪದ ಗಾಂಧಿಕಟ್ಟೆಯ ಬಳಿಯಲ್ಲಿ ಶುಕ್ರವಾರ ಸಂಜೆ ಪಿಎಫ್‍ಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎಂ. ಸಿದ್ದೀಕ್ ಪಿಎಫ್‍ಐ ಈತನ ಯಾವುದೇ ದೇಶವಿರೋಧಿ ಚಟುವಟಿಕೆ ನಡೆಸಿರುವ ದಾಖಲೆಗಳಿಲ್ಲ. ಆದಾಗ್ಯೂ ಸಂಘಟನೆಯ ನಾಯಕರನ್ನು ಮತ್ತು ಅಮಾಯಕ ಯುವಕರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಪಿಎಫ್‍ಐ ನೋವುಂಡ ಜನರಿಗೆ ಸಾಂತ್ವನ ನೀಡುವುದು. ಮರ್ಧಿತ ಸಮುದಾಯಕ್ಕೆ ಸಹಕಾರ ನೀಡುತ್ತಾ ಬಂದಿದೆ. ಸಂಘ ಪರಿವಾರದ ಶಡ್ಯಂತ್ರದ ಭಾಗವಾಗಿ ನಮ್ಮವರನ್ನು ಬಂಧಿಸಲಾಗುತ್ತಿದೆ. ಇಂತಹ ಪ್ರವೃತ್ತಿ ದೇಶದಲ್ಲಿ ಮುಂದುವರಿದಲ್ಲಿ ದೇಶದಲ್ಲಿ ಬದುಕುವವರ ಸ್ಥಿತಿ ಕಷ್ಟವಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶಾಫಿ ಬೆಳ್ಳಾರೆ, ಜಾಬಿರ್ ಅರಿಯಡ್ಕ, ಅಶ್ರಫ್ ಬಾವು, ಬಶೀರ್, ಉಮ್ಮರ್ ಕೆ.ಎಸ್, ಉಸ್ಮಾನ್, ಸಿದ್ದೀಕ್ ಅಲೆಕ್ಕಾಡಿ, ಮುಸ್ತಫಾ ಪೈಚಾರ್ ಮತ್ತಿತರರು ಉಪಸ್ಥಿತರಿದ್ದರು.





