ಸ್ಪಂದನ ಸಂಸ್ಥೆಯಿಂದ ಪರೀಕ್ಷಾರ್ಥಿಗಳಿಗೆ ವಿಶೇಷ ತರಗತಿ
ಭಟ್ಕಳ : ಸ್ಪಂದನ ಸಂಸ್ಥೆಯಿಂದ ಎಫ್.ಡಿ.ಎ ಮತ್ತು ಎಸ್.ಡಿ.ಎ. ಪರೀಕ್ಷೆಗಳಿಗೆ ಹಾಜರಾಗುವ ಪರೀಕ್ಷಾರ್ಥಿಗಳಿಗೆ ಪ್ರತಿ ಶನಿವಾರ ಮತ್ತು ರವಿವಾರ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳು ನಡೆಯುತ್ತದೆ. ತರಗತಿಗಳು ಇಲ್ಲಿನ ಸಾಗರ ರಸ್ತೆಯಲ್ಲಿರುವ ಹೆಸ್ಕಾಮ್ ಇಲಾಖೆಯ ಸಭಾಂಗಣದಲ್ಲಿ ಪ್ರತಿ ಶನಿವಾರ ಮದ್ಯಾಹ್ನ 2 ರಿಂದ ಸಂಜೆ 5 ಗಂಟೆಯ ವರೆಗೆ ಮತ್ತು ರವಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ತರಗತಿಗಳು ನಡೆಯಲಿದೆ.
ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಿರುವ ಪರೀಕ್ಷಾರ್ಥಿಗಳು ಈ ತರಗತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ 9620111625 ಹಾಗೂ ಶಿವಾನಂದ ನಾಯ್ಕ 6361273142 ಇವರನ್ನು ಸಂಪರ್ಕಿಸಬಹುದೆಂದು ಸಂಘಟಕರು ಕೋರಿದ್ದಾರೆ.
Next Story





