ಪಾಪ್ಯುಲರ್ ಫ್ರಂಟ್ ವತಿಯಿಂದ ಪ್ರತಿಭಟನೆ

ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ವತಿಯಿಂದ “ದೆಹಲಿಯ ಅಮಾಯಕ ಮುಸ್ಲಿಮರ ಮತ್ತು ಪಾಪ್ಯುಲರ್ ಫ್ರಂಟ್ ರಾಜ್ಯ ನಾಯಕರ ಆಕ್ರಮ ಬಂಧನವನ್ನು ಖಂಡಿಸಿ” ಬಿ.ಸಿ ರೋಡ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಲೀಮ್ ಫರಂಗಿಫೆಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ವಿಟ್ಲ ಅಧ್ಯಕ್ಷ ಝಕರಿಯಾ ಕಲ್ಲಡ್ಕ, ತಾಲೂಕು ಸಮಿತಿ ಸದಸ್ಯರಾದ ಇಜಾಝ್ ಅಹ್ಮದ್, ಅಬೂಬಕ್ಕರ್ ಸಿದ್ದೀಕ್ ಕಲ್ಲಡ್ಕ, ರಹಿಮಾನ್ ಮಠ, ಎಸ್.ಡಿ.ಪಿ.ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಾಹುಲ್ ಎಸ್.ಎಚ್ ಮತ್ತು ಬಂಟ್ವಾಳ ವಿಧಾನ ಸಭಾಧ್ಯಕ್ಷರಾದ ಯೂಸುಫ್ ಆಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ವಿಟ್ಲ ಕಾರ್ಯದರ್ಶಿಯಾದ ಹನೀಫ್ ಬೋಳಿಯಾರ್ ಸ್ವಾಗತಿಸಿದರು, ಶರೀಫ್ ಅಮ್ಮೆಮ್ಮಾರ್ ನಿರೂಪಿಸಿ ವಂದಿಸಿದರು.
Next Story





