'ಕೊಪ್ಪದಲ್ಲಿ ಕೊರೋನ ವೈರಸ್' ಸುಳ್ಳು ಸುದ್ದಿ: ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಸ್ಪಷ್ಟನೆ

ಸಾಂದರ್ಭಿಕ ಚಿತ್ರ
ಕೊಪ್ಪ, ಮಾ.13: ಪಟ್ಟಣದಲ್ಲಿ ಕೊರೋನ ವೈರಸ್ ಬಾಧಿತ ವ್ಯಕ್ತಿಯೊಬ್ಬರು ಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಪಟ್ಟಣದಲ್ಲಿ ಹರಿದಾಡಿದ್ದು, ಜನರನ್ನು ಆತಂಕಕ್ಕೆ ಈಡು ಮಾಡಿದೆ.
ಈ ಸಂಬಂಧ ಪತ್ರಿಕೆಯು ಕೊಪ್ಪ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಗಾನವಿ ಅವರಲ್ಲಿ ವಿಚಾರಿಸಿದ್ದು, ಇದು ಒಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ಯಾವುದೇ ಪ್ರಕರಣ ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ. ಇಂತಹ ಸುಳ್ಳು ಸುದ್ದಿ ಹಬ್ಬಿಸುವುದು ಕಾನೂನು ಬಾಹಿರ. ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಆಡಳಿತಾಧಿಕಾರಿ ವಿನಂತಿಸಿದರು.
ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸಿದ ವೈದ್ಯ ಯಾರು ಇದರ ಹಿಂದೆ ಇರುವ ದುರುದ್ದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಶೀಘ್ರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೊಪ್ಪ ತಾಲೂಕಿನಲ್ಲಿ ಕೊರೋನ ವೈರಸ್ ಬಾಧಿತ ಯಾವುದೇ ಪ್ರಕರಣ ದಾಖಲಾಗಿಲ್ಲ. ಜನರು ಭೀತಿ ಬೀಳುವ ಅವಶ್ಯಕತೆ ಇಲ್ಲ.
-ಡಾ. ಗಾನವಿ, ಆಡಳಿತಾಧಿಕಾರಿ, ಸರಕಾರಿ ಆಸ್ಪತ್ರೆ, ಕೊಪ್ಪ





