'ನಮ್ಮನ್ನು ಕ್ಷಮಿಸಿ, ನಿಮ್ಮನ್ನು ಪ್ರೀತಿಸುತ್ತೇವೆ': ಮಸೀದಿ ಮೇಲೆ ದಾಳಿ ನಡೆದ ಬಳಿಕ ಪೋಸ್ಟರ್ ಅಂಟಿಸಿದ ಹಿಂದೂಗಳು

ಗುಜರಾತ್: ಇಲ್ಲಿನ ದ್ವಾರಕಾದ ಶಹಜಹಾನ್ ಬಾದ್ ಬಳಿ ಮಸೀದಿಯೊಂದರ ಮೇಲೆ ಇತ್ತೀಚೆಗೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿತ್ತು. ಇದೀಗ ಇಲ್ಲಿನ ಸ್ಥಳೀಯ ಹಿಂದೂಗಳು 'ನಾವು ಮುಸ್ಲಿಮರನ್ನು ಪ್ರೀತಿಸುತ್ತೇವೆ', 'ನಮ್ಮನ್ನು ಕ್ಷಮಿಸಿ' ಎಂದು ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಫೆಬ್ರವರಿ 28ರಂದು ಮಸೀದಿಯ ಮೇಲೆ ದಾಳಿ ನಡೆದಿತ್ತು.
"2:30ರ ವೇಳೆ ದಾಳಿ ನಡೆದಿತ್ತು. ದುಷ್ಕರ್ಮಿಗಳು ಕಲ್ಲುಗಳನ್ನು ಎಸೆದಿದ್ದರು. ಇದರಿಂದ ಮಸೀದಿಯ ಕಿಟಕಿಗಳಿಗೆ ಹಾನಿಯಾಗಿದೆ" ಎಂದು ಇಲ್ಲಿನ ನಿವಾಸಿ ಸಾದ್ ಮಜೀದ್ ಎನ್ನುವವರು ಮಾಹಿತಿ ನೀಡಿದ್ದಾರೆ.
ಇದೀಗ ಸ್ಥಳೀಯ ಹಿಂದೂಗಳು ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಮುಸ್ಲಿಮರಲ್ಲಿ ಧೈರ್ಯ ತುಂಬಿದ್ದಾರೆ. "ನಮ್ಮನ್ನು ಕ್ಷಮಿಸಿ", "ನಾವು ನಿಮ್ಮನ್ನು ಪ್ರೀತಿಸುತ್ತೇವೆ", "ಹಿಂದೂಗಳು ಮುಸ್ಲಿಮರನ್ನು ಪ್ರೀತಿಸುತ್ತಾರೆ" ಎಂದು ಪೋಸ್ಟರ್ ಗಳಲ್ಲಿ ಬರೆಯಲಾಗಿದೆ.
Next Story







