ಭಾರತದಲ್ಲಿ ಕೊರೋನ ವೈರಸ್ ಪೀಡಿತರ ಸಂಖ್ಯೆ 83ಕ್ಕೇರಿಕೆ

ಹೊಸದಿಲ್ಲಿ, ಮಾ.14: ಭಾರತದಲ್ಲಿ ಕೊರೋನ ವೈರಸ್ ಪೀಡಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ಭಾರತದಲ್ಲಿ ಈ ತನಕ ಮಹಾಮಾರಿ ಕೊರೋನ ವೈರಸ್ ಪೀಡಿತರ ಪೈಕಿ 10 ಮಂದಿ ಗುಣಮುಖರಾಗುತ್ತಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಹಾಗೂ ದಿಲ್ಲಿಯಲ್ಲಿ ತಲಾ ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ವೈರಸ್ ಪೀಡಿತರಲ್ಲಿ ಭಾರತದ 66 ಹಾಗೂ ವಿದೇಶದ 17 ಜನರಿದ್ದಾರೆ ಎಂದು ತಿಳಿದುಬಂದಿದೆ.
Next Story





