ಖಾಸಗಿ ವಲಯದ ಶೇ.80ರಷ್ಟು ಉದ್ಯೋಗ ಕಡ್ಡಾಯವಾಗಿ ಮಹಾರಾಷ್ಟ್ರಿಗರಿಗೆ: ಉದ್ಧವ್ ಸರಕಾರದ ಚಿಂತನೆ

ಮುಂಬೈ: ಮಹಾರಾಷ್ಟ್ರದಲ್ಲಿ 15 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ವಾಸವಾಗಿರುವವರಿಗೆ ಅಲ್ಲಿನ ಖಾಸಗಿ ವಲಯದ ಶೇ.80ರಷ್ಟು ಉದ್ಯೋಗಗಳನ್ನು ಮೀಸಲಿರಿಸುವ ಕುರಿತಾದ ಮಸೂದೆಯೊಂದನ್ನು ಮಂಡಿಸಲು ಮಹಾರಾಷ್ಟ್ರ ಸರಕಾರ ಯೋಚಿಸುತ್ತಿದೆ.
ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಶಿವಸೇನೆ ಹಾಗೂ ಎನ್‍ಸಿಪಿ ನೀಡಿರುವ ಆಶ್ವಾಸನೆಯನ್ವಯ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ದೇಶದ ವಿವಿಧೆಡೆಗಳಿಂದ ಉದ್ಯೋಗ ಅರಸಿಕೊಂಡು ಸಾವಿರಾರು ಮಂದಿ ಮುಂಬೈಗೆ ಆಗಮಿಸುವುದರಿಂದ ಸರಕಾರದ ಇಂತಹ ಒಂದು ಕಾನೂನು ಹಲವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಉದ್ಯೋಗಗಳಲ್ಲಿ ಶೇ 80ರಷ್ಟು ಮೀಸಲಾತಿಯನ್ನು ಮಹಾರಾಷ್ಟ್ರದವರಿಗೆ ನೀಡುವಂತೆ ಖಾಸಗಿ ಸಂಸ್ಥೆಗಳಿಗೆ ಸರಕಾರ ಈಗಾಗಲೇ ಸೂಚಿಸಿದ್ದರೂ ನಿಯಮವನ್ನು ಪಾಲಿಸಲಾಗುತ್ತಿಲ್ಲ ಎಂದು ರಾಜ್ಯ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಇತ್ತೀಚೆಗೆ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದರು. ಖಾಸಗಿ ಸಂಸ್ಥೆಗಳು ನಿಯಮ ಪಾಲಿಸುವಂತೆ ಮಾಡಲು ಈ ಕಾನೂನು ತರಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
Next Story





