ಕೊರೊನಾವೈರಸ್ ತಡೆಯುತ್ತದೆ ಎಂದು ಗೋಮೂತ್ರ ಸೇವನೆ ಪಾರ್ಟಿ ಆಯೋಜಿಸಿದ ಹಿಂದು ಮಹಾಸಭಾ

ಹೊಸದಿಲ್ಲಿ: ಮಾರಕ ಕೊರೋನವೈರಸ್ ದೂರವಿರಿಸುವ ಶಕ್ತಿ ಗೋಮೂತ್ರಕ್ಕಿದೆ ಎಂದು ಹೇಳಿಕೊಂಡು ಗೋಮೂತ್ರ ಬಳಸಿ ತಯಾರಿಸಲಾದ ಪಾನೀಯ ಸೇವಿಸುವ ಪಾರ್ಟಿಯೊಂದನ್ನು ಇಂದು ಅಖಿಲ ಭಾರತ ಹಿಂದು ಮಹಾಸಭಾ ರಾಜಧಾನಿಯಲ್ಲಿನ ತನ್ನ ಕೇಂದ್ರೀಯ ಕಾರ್ಯಾಲಯದಲ್ಲಿ ಆಯೋಜಿಸಿತ್ತು.
ಸುಮಾರು 200 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆನ್ನಲಾಗಿದ್ದು ಇಂತಹದೇ ಕಾರ್ಯಕ್ರಮಗಳನ್ನು ದೇಶದ ಇತರೆಡೆ ಆಯೋಜಿಸುವ ಇರಾದೆಯೂ ಸಂಘಟನೆಗಿದೆ.
"ನಾವು 21 ವರ್ಷಗಳಿಂದ ಗೋಮೂತ್ರ ಸೇವಿಸುತ್ತಿದ್ದೇವೆ, ದನದ ಸೆಗಣಿ ಬಳಸಿ ಸ್ನಾನ ಕೂಡ ಮಾಡುತ್ತೇವೆ. ಇಂಗ್ಲಿಷ್ ಮದ್ದು ಸೇವಿಸುವ ಅಗತ್ಯ ನಮಗೆ ಬಂದಿಲ್ಲ'' ಎಂದು ಪಾರ್ಟಿಯಲ್ಲಿ ಹಾಜರಿದ್ದ ಒಬ್ಬ ವ್ಯಕ್ತಿ ಹೇಳಿದರು.
ಗೋಮೂತ್ರ ಪಾನೀಯ ತುಂಬಿದ ಚಮಚವನ್ನು ಕೊರೋನಾವೈರಸ್ ಚಿತ್ರದ ಹತ್ತಿರ ಇರಿಸಿ ಫೋಟೋಗಳಿಗೆ ಮಹಾಸಭಾದ ಅಧ್ಯಕ್ಷ ಚಕ್ರಪಾಣಿ ಮಹಾರಾಜ್ ಪೋಸ್ ಕೂಡ ನೀಡಿದರು.
Next Story





