ಆರೂರು ಗ್ರಾಪಂನಲ್ಲಿ ಕೊರೋನ ಮುಂಜಾಗ್ರತಾ ಸಭೆ

ಉಡುಪಿ, ಮಾ.14: 21ನೇ ಆರೂರು ಗ್ರಾಪಂನ ಪಂಚಾಯತ್ ಸಭಾಂಗಣ ದಲ್ಲಿ ಕೊರೋನ (ಕೋವಿಡ್ 19) ಬಗ್ಗೆ ಮುಂಜಾಗ್ರತಾ ಸಭೆ ಶನಿವಾರ ನಡೆಯಿತು.
ಸಭೆಯಲ್ಲಿ ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಷ್ಮಾ ಹೆಗ್ಡೆ ಕೊರೋನ ವೈರಸ್ ಕುರಿತು ಮಾತನಾಡಿ, ಕೊರೋನ ಬಗ್ಗೆ ಭಯಬೇಡ, ಎಚ್ಚರವಿರಲಿ.ದೂರ ಸಂಚಾರವನ್ನು ಸಾದ್ಯವಿದ್ದಷ್ಟು ಕಡಿಮೆ ಮಾಡಿ. ಹೆಚ್ಚು ನೀರು ಕುಡಿಯಿರಿ. ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸುವಂತೆ ಸಲಹೆ ನೀಡಿದರು. ಜೊತೆಗೆ ಎಚ್1ಎನ್1, ಮಂಗನ ಕಾಯಿಲೆ ಕುರಿತು ಸ ಮಾಹಿತಿಗಳನ್ನು ಹಂಚಿಕೊಂಡರು.
ಗ್ರಾಪಂ ಅಧ್ಯಕ್ಷ ರಾಜೀವ್ ಕುಲಾಲ್ ಮಾತನಾಡಿ, ಜನರಲ್ಲಿ ಕೊರೋನ ಬಗ್ಗೆ ಜಾಗ್ರತಿ ಮೂಡಿಸುವುದು ನಮ್ಮ ಕರ್ತವ್ಯ. ಸಭೆ ಸಮಾರಂಭ ಗಳಲ್ಲಿ ಆದಷ್ಟು ಕಡಿಮೆ ಭಾಗವಹಿಸುವಂತೆ ತಿಳಿಸಿದರು. ಹೊರದೇಶದಿಂದ ಬಂದವರ ಬಗ್ಗೆ ಹೆಚ್ಚು ನಿಗಾ ವಹಿಸುವಂತೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ, ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು.
ಗ್ರಾಪಂ ಕಾರ್ಯದರ್ಶಿ ಗುರುರಾಜ್ ವಂದಿಸಿದರು.







