ಆನ್‌ಲೈನ್ ಮೂಲಕ ಯುವತಿಗೆ ವಂಚನೆ: ದೂರು
ಉಡುಪಿ, ಮಾ.14: ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಯುವತಿಯೊಬ್ಬಳಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ವಿದ್ಯಾರತ್ನ ನಗರದ ಮೇಘಾ ಜೆ.ಪಾಂಡ್ಯ(21) ಎಂಬವರು ಗೂಗಲ್ ಪೇ ಅಕೌಂಟ್ ಡಿಆಕ್ಟಿವ್ ಆಗಿದ್ದು, ಈ ಬಗ್ಗೆ ಕಸ್ಟಮರ್ ಕೇರ್‌ಗೆ ಕಾಲ್ ಮಾಡಿದಾಗ ನಿಮಗೆ ಕಾಲ್ ಬರುವುದಾಗಿ ತಿಳಿಸಿದ್ದರು. ಅದರಂತೆ ಕರೆ ಮಾಡಿದ ವ್ಯಕ್ತಿ ಪೇಟಿಎಂ ಕೆವೈಸಿ ನಂಬ್ರದಿಂದ ಮಾತನಾಡುವು ದಾಗಿ ತಿಳಿಸಿ ಕ್ವಿಕ್ ಸಪೋರ್ಟ್ ಎಂಬ ಆ್ಯಪ್ ಡೌನ್ ಲೋಡ್ ಮಾಡುವಂತೆ ಸೂಚಿಸಿದ್ದನು.
ಹಾಗೆ ಡೌನ್ ಲೋಡ್ ಮಾಡಿದ ಮೇಘಾ ಅವರ ವಿವಿಧ ಬ್ಯಾಂಕ್ ಖಾತೆ ಗಳಿಂದ ಒಟ್ಟು 51,891ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





