‘ರಕ್ತದ ಕ್ಯಾನ್ಸರ್ ಚಿಕಿತ್ಸೆಗೆ ಬೇಕು 37 ಲಕ್ಷ ರೂ.’ : ನೆರವಿಗೆ ಸಹಕರಿಸಲು ಸಂತ್ರಸ್ತ ಕುಟುಂಬದ ಮನವಿ

ಮಂಗಳೂರು, ಮಾ.14: ನಗರದ ಜಪ್ಪು ನಿವಾಸಿ ಅಬ್ದುಲ್ ಶಮೀಮ್ ಹಾಗೂ ಝೈನಾಬ ರಮೀಝಾ ದಂಪತಿಯ ಐದೂವರೆ ವರ್ಷದ ಮಗು ಅಬ್ದುಲ್ ಶಾಮಿಲ್ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದೆ. ಮಗುವಿಗೆ ಕೂಡಲೇ ವಿವಿಧ ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಅದಕ್ಕಾಗಿ 37 ಲಕ್ಷ ರೂ. ಅಗತ್ಯವಿದ್ದು, ನೆರವು ನೀಡಲು ಸಾರ್ವಜನಿಕರಲ್ಲಿ ಕುಟುಂಬ ಮನವಿ ಮಾಡಿದೆ.
ಕುಟುಂಬವು ಕಡುಬಡತನದಿಂದ ಕೂಡಿದ್ದು, ಮಗುವಿನ ತಂದೆ ಆಟೊರಿಕ್ಷಾ ಚಾಲಕರಾಗಿ ಬದುಕು ಸಾಗಿಸುತ್ತಿದ್ದಾರೆ. ಈ ನಡುವೆಯೇ ಮಗುವಿಗೆ ರಕ್ತದ ಕ್ಯಾನ್ಸರ್ ಮಾರಕವಾಗಿ ಪರಿಣಮಿಸಿದ್ದು, ಕುಟುಂಬವು ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಈಗಾಗಲೇ ಸಂಬಂಧಿಕರು, ನೆರೆಹೊರೆಯವರು, ಪರಿಚಯಸ್ಥರಲ್ಲಿ ಸಂಪರ್ಕಿಸಿದ ದೊರೆತ ಹಣವು ಇಂದಿನವರೆಗಿನ ಚಿಕಿತ್ಸೆಗೆ ಪಾವತಿಯಾಗಿದೆ. ಇನ್ನು ಹಲವು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, 37 ಲಕ್ಷ ರೂ. ಅಗತ್ಯವಿದೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.
ಮಗುವಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅತ್ತಾವರದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚೇತರಿಕೆಯ ಬಳಿಕ ಮನೆಗೆ ಕರೆದೊಯ್ಯಲಾಗಿತ್ತು. ಎರಡು ತಿಂಗಳ ಬಳಿಕ ಮಗುವಿಗೆ ಒಂದು ಕಣ್ಣು ಕಾಣದಾಯಿತು. ಆಗ ರಕ್ತದ ಕಾನ್ಸರ್ ಎನ್ನುವುದು ಪತ್ತೆಯಾಯಿತು. ಚಿಕಿತ್ಸೆ ನೀಡಿದ ಬಳಿಕವೂ ಮತ್ತೊಂದು ಕಣ್ಣೀಗೂ ಈ ಬಾಧೆ ತಗುಲಿತು. ಸದ್ಯ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಿಮೊಥೆರಪಿ, ರೇಡಿಯೇಶನ್ ಸಹಿತ ಹಲವು ಶಸ್ತ್ರಚಿಕಿತ್ಸೆ ಮಾಡಿಸುವ ಅಗತ್ಯವಿದೆ. ಸಾಧ್ಯವಾದಷ್ಟು ಆರ್ಥಿಕವಾಗಿ ಸಹಾಯ ಮಾಡಲು ಕುಟುಂಬವು ಮನವಿ ಮಾಡಿದೆ.
ಬ್ಯಾಂಕ್ ಖಾತೆ:
Zainaba Rameeza
A/c No:1553101018096
IFSC: CNRB0001553
Canara Bank
Branch: Morganis Road, Mangalore
Google pay/Paytm: ಅಥವಾ 9880089877
ಹೆಚ್ಚಿನ ಮಾಹಿತಿಗಾಗಿ ಮಗುವಿನ ತಂದೆ ಅಬ್ದುಲ್ ಶಮೀಮ್ (9880089877), ಕೆಕೆಎಂಎ ರಾಜ್ಯ ಶಾಖೆಯ ಅಧ್ಯಕ್ಷ ಎಸ್.ಎಂ. ಫಾರೂಕ್ (7204009305) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.







