ಬೆಂಗಳೂರು: ಚಿತ್ರಮಂದಿರಳ ಮುಂದೆ 'ನೋ ಶೋ' ಬೋರ್ಡ್

ಬೆಂಗಳೂರು, ಮಾ.14: ಕೊರೋನ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮಾ.14ರಿಂದ ಒಂದು ವಾರದ ಕಾಲ ರಾಜ್ಯದಲ್ಲಿ ಥಿಯೇಟರ್ ಹಾಗೂ ಮಾಲ್‌ಗಳನ್ನ ಬಂದ್ ಮಾಡುವಂತೆ ರಾಜ್ಯ ಸರಕಾರ ಆದೇಶ ನೀಡಿರುವ ಹಿನ್ನೆಲೆ ಮೆಜೆಸ್ಟಿಕ್‌ನ ಪ್ರಮುಖ ಥಿಯೇಟರ್‌ಗಳು ಬಂದ್ ಆಗಿದ್ದು, ಚಿತ್ರಮಂದಿರಗಳ ಮುಂದೆ 'ನೋ ಶೋ' ಎಂದು ಬೋರ್ಡ್ ಹಾಕಲಾಗಿದೆ.
ನಗರದ ಕೆ.ಜಿ. ರಸ್ತೆಯ ಪ್ರಮುಖ ಥಿಯೇಟರ್‌ಗಳಾದ ನರ್ತಕಿ, ಸಂತೋಷ್, ಅನುಪಮ, ತ್ರಿವೇಣಿಯಲ್ಲಿ ಸಿನಿಮಾ ಪ್ರದರ್ಶನವನ್ನ ರದ್ದು ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ಜನರಿಂದ ತುಂಬಿರುತ್ತಿದ್ದ ಚಿತ್ರಮಂದಿರಗಳು ಇಂದು ಖಾಲಿ ಖಾಲಿಯಾಗಿವೆ.
Next Story





