ಕನ್ನಡ ಸಂಖ್ಯಾಫಲಕ ಆರೋಪ: ದಂಡ ಹಾಕಿದ ಸಂಚಾರ ಪೊಲೀಸರು
ಬೆಂಗಳೂರು, ಮಾ.14: ಕನ್ನಡದಲ್ಲಿ ಸಂಖ್ಯಾ ಫಲಕ ಹಾಕಿದ್ದ ಆರೋಪದಡಿ ಇಲ್ಲಿನ ಪೀಣ್ಯ ಸಂಚಾರ ಠಾಣೆ ಪೊಲೀಸರು 500 ರೂ. ದಂಡ ವಿಧಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಗರದ ನಿವಾಸಿ ಮಹೇಶ್ ಎಂಬುವರು, ಶುಕ್ರವಾರ ಮಧ್ಯಾಹ್ನ ಇಲ್ಲಿನ ಪೀಣ್ಯ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ 500 ರೂ. ದಂಡ ವಿಧಿಸಿದ್ದಾರೆ. ಕಾರಣ ಕೇಳಿದಾಗ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಸಂಪೂರ್ಣವಾಗಿ ಕನ್ನಡದಲ್ಲಿ ಬರೆಸಲಾಗಿದೆ. ಇದು ನಿಯಮ ಬಾಹಿರ, ಹಾಗಾಗಿ ದಂಡ ವಿಧಿಸಿರುವುದಾಗಿ ಪೊಲೀಸರು ಸಮಜಾಯಿಷಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಕನ್ನಡದಲ್ಲಿ ವಾಹನಗಳ ನೋಂದಣಿ ಫಲಕ ಬರೆಸಿದರೆ ತಪ್ಪೇನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ.
Next Story





