ಮಂಗಳೂರು: 4 ಗಂಟೆ ವಿಳಂಬವಾದರೂ ತೆರಳದ ಏರ್ ಇಂಡಿಯಾ ಎಕ್ಸ್‌ಪ್ರೆಸ್
► ರಾತ್ರಿ 8 ಗಂಟೆಗೆ ದುಬೈಗೆ ತೆರಳಬೇಕಾದ ವಿಮಾನ ► ಪರದಾಡಿದ ಪ್ರಯಾಣಿಕರು

ಮಂಗಳೂರು, ಮಾ.14: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಶನಿವಾರ ರಾತ್ರಿ 8:15ಕ್ಕೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ರಾತ್ರಿ 12 ಗಂಟೆಯಾದರೂ ತೆರಳದೆ ಪ್ರಯಾಣಿಕರು ಸಂಕಷ್ಟಕ್ಕೀಡಾದ ಘಟನೆ ನಡೆದಿದೆ.
ಎಂದಿನಂತೆ ವಿಮಾನ ನಿಲ್ದಾಣದ ಬೋರ್ಡಿಂಗ್ ಪ್ರಕ್ರಿಯೆ ಮುಗಿದು ವಿಮಾನ ಏರಿದ ಪ್ರಯಾಣಿಕರು 2 ಗಂಟೆಗಳ ಕಾಲ ವಿಮಾನದಲ್ಲೇ ಕುಳಿತುಕೊಳ್ಳವಂತಾಯಿತು. ಬಳಿಕ ಈ ಬಗ್ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕಾರಿಗಳಿಗೆ ಕೆಲವು ಪ್ರಯಾಣಿಕರು ದೂರು ನೀಡಿದ್ದು, ಅವರು ಸ್ಪಷ್ಟ ವಿವರಣೆ ನೀಡಲಿಲ್ಲ ಎಂದು ಪ್ರಯಾಣಿಕರೋರ್ವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ ಏರ್ ಇಂಡಿಯಾ ಅಧಿಕಾರಿಗಳನ್ನು ಸಂಪರ್ಕಿಸಿದಾಗ ವಿಮಾನದ ಸಿಬ್ಬಂದಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ವಿಮಾನ ತೆರಳುವುದು ತಡವಾಗಿದೆ. ರಾತ್ರಿ 12:30 ಅಥವಾ 1ಗಂಟೆಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರಿನಿಂದ ದುಬೈಗೆ ತೆರಳಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Next Story





