ಕೊರೋನ ವೈರಸ್ : ಕೇರಳವನ್ನು ಹಿಂದಿಕ್ಕಿದ ಮಹಾರಾಷ್ಟ್ರ

ಮುಂಬೈ, ಮಾ.15: ಮಾಹಾಮಾರಿ ಕೊರೋನ ವೈಸಸ್ ಪೀಡಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದು, ಕೇರಳವನ್ನು ಇದೀಗ ಮಹಾರಾಷ್ಟ್ರ ಹಿಂದಿಕ್ಕಿದೆ.
ಮಹಾರಾಷ್ಟ್ರದಲ್ಲಿ 31 ಮಂದಿಗೆ ಕೊರೋನ ವೈರಸ್ ಸೋಂಕು ಬಾಧಿಸಿದೆ. ಕೇರಳದಲ್ಲಿ ಇದುವರೆಗೆ 22 ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 19ರಿಂದ 31ಕ್ಕೆ ಏರಿದೆ.
ಸೌದಿ ಅರೇಬಿಯಾದಿಂದ ಹಿಂದಿರುಗಿದ 71 ವರ್ಷದ ವ್ಯಕ್ತಿ ಯೊಬ್ಬರು ಬುಲ್ಬಾನಾದಲ್ಲಿ ನಿಧನರಾದರು. ಅವರಲ್ಲಿ ಕೊರೋನ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರೂ, ಆರೋಗ್ಯ ಸಚಿವ ರಾಜೇಶ್ ಟೊಪೆ ಅವರನ್ನು ಇನ್ನೂ ಪರೀಕ್ಷಿಸದ ಕಾರಣ ಇದು ಶಂಕಿತ ಪ್ರಕರಣ ಎಂದು ಹೇಳಿದ್ದಾರೆ.
ಶನಿವಾರ ರಾಜ್ಯದಲ್ಲಿ ಬೆಳಕಿಗೆ ಬಂದ 12 ಹೊಸ ಪ್ರಕರಣಗಳಲ್ಲಿ ಐದು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಎರಡು ಯವತ್ಮಾಲ್ ಮತ್ತು ಮುಂಬೈ, ವಾಶಿ, ಕಾಮೋಥೆ, ಕಲ್ಯಾಣ್ ಮತ್ತು ನಾಗ್ಪುರದಲ್ಲಿ ತಲಾ ಒಂದು ಪ್ರಕರಣಗಳಾಗಿವೆ
ಎಲ್ಲಾ ಹವಾನಿಯಂತ್ರಿತ ಮಾಲ್‌ಗಳು, ಶಾಲೆಗಳು, ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳನ್ನು ಮಾ.31ರ ತನಕ ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿದೆ.





