ಪ್ರಕಾಶ್ ಮಾರ್ಪಾಡಿಗೆ ಪಿಎಚ್ ಡಿ ಪದವಿ

ಕೊಣಾಜೆ: ಮಂಗಳೂರು ವಿ.ವಿಯ ಸಮಾಜ ಕಾರ್ಯ ವಿಭಾಗದ ಪ್ರಕಾಶ್ ಮಾರ್ಪಾಡಿಯವರು ಮಂಗಳೂರು ವಿವಿಗೆ ಸಲ್ಲಿಸಿದ್ದ "ಯುಟಿಲೈಸೇಷನ್ ಆಫ್ ರಿಪ್ರೊಡಕ್ಟಿವ್ ಆ್ಯಂಡ್ ಚೈಲ್ಡ್ ಹೆಲ್ತ್ ಕೇರ್ ಸರ್ವಿಸಸ್ ಅಮಾಂಗ್ ದಿ ಕೊರಗ ಟ್ರೈಬಲ್ ವುಮೆನ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್" ಎಂಬ ಪ್ರೌಢ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ.
ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಎಸ್. ಸಿಂಘೆಯವರು ಇವರಿಗೆ ಮಾರ್ಗದರ್ಶನ ನೀಡಿದ್ದರು. ಇವರು ಮೂಡುಬಿದ್ರಿ ಒಂಟಿಕಟ್ಟೆ ಪಾದೆಯ ದಿ.ತನಿಯ ಮೊಗೇರ ಮತ್ತು ಪ್ರೇಮ ಅವರ ಪುತ್ರ. ಪ್ರಸ್ತುತ ಬೆಂಗಳೂರಿನ ಕೆ.ಹೆಚ್.ಪಿ.ಟಿ ಸಂಸ್ಥೆಯಲ್ಲಿ ಸಂಶೋಧನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Next Story





