Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರು: ಜನಜೀವನದ ಮೇಲೆ...

ಚಿಕ್ಕಮಗಳೂರು: ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ; ಪ್ರವಾಸೋದ್ಯಮ, ವಿವಾಹಗಳಿಗೆ ತಟ್ಟಿದ ಬಿಸಿ

ಕೊರೋನಾ ವೈರಸ್ ಭೀತಿ

ವಾರ್ತಾಭಾರತಿವಾರ್ತಾಭಾರತಿ15 March 2020 7:42 PM IST
share

ಚಿಕ್ಕಮಗಳೂರು, ಮಾ.15: ಕೊರೋನಾ ವೈರಸ್ ಸೋಂಕಿನ ಭೀತಿ ಜಿಲ್ಲೆಯ ಪ್ರವಾಸೋದ್ಯಮ, ಕೋಳಿ ಉದ್ಯಮ, ವಿವಾಹ ಸೇರಿದಂತೆ ಸಾರ್ವಜನಿಕರ ಜನಜೀವನದ ಮೇಲೆ ವ್ಯಾಪಕವಾದ ಪರಿಣಾಮ ಬೀರಿದೆ. ಪ್ರವಾಸಿಗರ ಸ್ವರ್ಗವಾಗಿದ್ದ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೊರೋನಾ ವೈರಸ್ ಸೋಂಕಿನ ಭೀತಿಯಿಂದಾಗಿ ಜನರು ಮನೆಗಳಿಂದ ಹೊರ ಬರಲೂ ಹಿಂದು ಮುಂದು ನೋಡುವಂತಾಗಿದೆ.

ಇಡೀ ವಿಶ್ವಕ್ಕೆ ತಲೆನೋವು ತಂದೊಡ್ಡಿರುವ ಕೊರೋನಾ ವೈರಸ್ ಸೋಂಕು ನಮ್ಮ ದೇಶವನ್ನೂ ಕಾಡುತ್ತಿದೆ. ಅದರಲ್ಲೂ ರಾಜ್ಯದಲ್ಲಿ 6 ಮಂದಿ ಸೋಂಕಿಗೆ ತುತ್ತಾಗಿ, ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಸಭೆ, ಸಮಾರಂಭ, ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಸರಕಾರ ಆದೇಶ ಹೊರಡಿಸಿದ ನಂತರವಂತೂ ಜಿಲ್ಲೆಯಲ್ಲಿ ಸಾರ್ವಜನಿಕರು ಕೊರೋನಾ ವೈರಸ್ ಸೋಂಕಿನ ಬಗ್ಗೆ ಭಾರೀ ಮುಂಜಾಗ್ರತೆ ವಹಿಸುತ್ತಿದ್ದಾರೆ. ಸುಖಾಸುಮ್ಮನೆ ತಿರುಗಾಡುವುದು, ಬೇಕಾಬಿಟ್ಟಿ ಮಾಂಸಾಹಾರಿ ಸೇವನೆ, ರಸ್ತೆ ಬದಿ ತಿನಿಸುಗಳನ್ನು ತಿನ್ನುವುದಕ್ಕೂ ಹಿಂದುಮುಂದು ನೋಡುತ್ತಿದ್ದಾರೆ. ಇವೆಲ್ಲದರ ಪರಿಣಾಮ ನಗರದ ಬಸ್ ನಿಲ್ದಾಣ, ಸಾರ್ವಜನಿಕರ ಆಸ್ಪತ್ರೆ ಸೇರಿದಂತೆ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ ಸೇರಿದಂತೆ ಹೊರನಾಡು, ಶೃಂಗೇರಿಯಂತಹ ಯಾತ್ರಾಸ್ಥಳಗಳಲ್ಲೂ ಪ್ರವಾಸಿಗರ ಸಂಖ್ಯೆ, ಸ್ಥಳೀಯ ಜನರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಾದ ಬಾಬಾ ಬುಡನ್‍ಗಿರಿ ಹಾಗೂ ಮುಳ್ಳಯ್ಯನಗಿರಿ ಶ್ರೇಣಿಗಳ ಪ್ರಾಕೃತಿ ಸೌಂದರ್ಯವನ್ನು ಸವಿಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಶನಿವಾರ ಮತ್ತು ರವಿವಾರ ಆಗಮಿಸುತ್ತಿದ್ದರು. ಪ್ರವಾಸಿಗರಿಂದಾಗಿ ಈ ದಿನಗಳಂದು ನಗರದ ಐಜಿ ರಸ್ತೆಯಲ್ಲಿ ಪ್ರವಾಸಿಗರ ವಾಹನಗಳು ತುಂಬಿ ತುಳುಕುತ್ತಿದ್ದವು. ಲಾಡ್ಜ್ ಗಳು, ಹೊಟೇಲ್‍ಗಳು, ಹೋಂಸ್ಟೇಗಳು, ರೆಸಾರ್ಟ್‍ಗಳು ಹೊರ ಜಿಲ್ಲೆ, ರಾಜ್ಯಗಳ ಪ್ರವಾಸಿಗರಿಂದ ಭರ್ತಿಯಾಗುತ್ತಿದ್ದವು. ಬಾಬಾ ಬುಡನ್‍ಗಿರಿ, ಉಳ್ಳಯ್ಯನಗಿರಿಯಲ್ಲಂತೂ ಶನಿವಾರ, ರವಿವಾರ ಜನಜಾತ್ರೆ ನೆರೆಯುತ್ತಿತ್ತು. ಆದರೆ ಕಳೆದ ಎರಡು ವಾರಗಳಿಂದ ಕೊರೋನಾ ವೈರಸ್ ಸೋಂಕಿನ ಭೀತಿಯಿಂದಾಗಿ ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಬೆರಳೆಣಿಕೆಯಷ್ಟು ಕಂಡು ಬರುತ್ತಿದ್ದಾರೆ. ಶನಿವಾರ, ರವಿವಾರ ನಗರದ ಐಜಿ ರಸ್ತೆಗಳು ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡು ಬಂತು. ಲಾಡ್ಜ್, ಹೋಂ ಸ್ಟೇಗಳು ಪ್ರವಾಸಿಗರಿಲ್ಲದೇ ಖಾಲಿ ಹೊಡೆಯುತ್ತಿವೆ.

ಇನ್ನು ರಾಜ್ಯ, ಹೊರ ರಾಜ್ಯಗಳಲ್ಲೂ ಪ್ರಸಿದ್ಧಿಯಾಗಿರುವ ಶೃಂಗೇರಿ, ಹೊರನಾಡು ಯಾತ್ರಾಸ್ಥಳಗಳು ಕೂಡ ಕಳೆದ ಎರಡು ವಾರಗಳಿಂದ ಪ್ರವಾಸಿಗರಿಲ್ಲದೇ ಬರಿದಾಗಿವೆ. ತಮಿಳುನಡು, ಆಂದ್ರಪ್ರದೇಶ, ಕೇರಳದಂತಹ ರಾಜ್ಯಗಳು ಹಾಗೂ ರಾಜ್ಯದ ಬಹುತೇಕ ಎಲ್ಲ ರಾಜ್ಯಗಳಿಂದ ಈ ಯಾತ್ರಾಸ್ಥಳಗಳಿಗೆ ಆಗಮಿಸುತ್ತಿದ್ದ ಯಾತ್ರಾರ್ಥಿಗಳು, ಪ್ರವಾಸಿಗರು ಇತ್ತ ತಲೆಹಾಕುತ್ತಿಲ್ಲ. ಪ್ರವಾಸಿಗರು ಭಕ್ತರಿಲ್ಲದೇ ಹೊರನಾಡು, ಶೃಂಗೇರಿ ದೇವಾಲಯಗಳ ಆವರಣ ಖಾಲಿ ಇದ್ದ ದೃಶ್ಯಗಳು ಶನಿವಾರ, ರವಿವಾರ ಕಂಡು ಬಂದಿದ್ದು, ಪ್ರವಾಸಿಗರನ್ನೇ ನಂಬಿಕೊಂಡಿದ್ದ ಈ ಭಾಗದ ಲಾಡ್ಜ್ ಗಳು, ಹೊಟೇಲ್‍ಗಳು, ಕಾಫಿ ಶಾಪ್‍ಗಳೂ, ಕಾಫಿ, ಟೀ ಪುಡಿ ಹಾಗೂ ಸಾಂಬಾರ ಪದಾರ್ಥಗಳ ಮಾರಾಟ ಮಳಿಗೆಗಳು ವ್ಯಾಪಾರ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ.

ಕೊರೋನಾ ವೈರಸ್ ಸೋಂಕಿನ ಭೀತಿ ಮಾಂಸ ಮಾರಾಟ ಉದ್ಯಮಕ್ಕೂ ಭಾರೀ ಹೊಡೆತ ನೀಡಿದೆ. ಸದಾ ಜನರಿಂದ ತುಂಬಿ ತುಲುಕುತ್ತಿದ್ದ ನಗರದ ಕೋಳಿ ಮಾಂಸದ ಅಂಗಡಿಗಳು ರವಿವಾರವೂ ಜನರಿದಲ್ಲದೇ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಳೆದ ಎರಡು ವಾರಗಳಿಂದ ಸಾಮಾನ್ಯವಾಗಿದೆ. ತಿಂಗಳ ಹಿಂದೆ ಜಿಲ್ಲಾದ್ಯಂತ ಪ್ರತೀ ಕೆಜಿ ಕೋಳಿ ಮಾಂಸದ ಬೆಲೆ 160ರಿಂದ 180 ಇತ್ತು. ಆದರೆ ಕಳೆದ ಎರಡು ವಾರಗಳಿಂದ ಪ್ರತೀ ಒಂದು ಕೆಜಿ ಕೋಳಿ ಮಾಂಸ 80ರಿಂದ 100 ರೂ.ಗೆ ಬಿಕರಿಯಾಗುತ್ತಿದೆ. ಕೊರೋನಾ ವೈರಸ್ ಕೋಳಿ ಮಾಂಸದಿಂದ ಹರಡುತ್ತದೆ ಎಂಬ ಸುಳ್ಳು ಸುದ್ದಿಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪರಿಣಾಮ ಜನರು ಕೋಳಿ ಮಾಂಸ ಖರೀದಿಗೆ ಮುಂದಾಗುತ್ತಿಲ್ಲ ಎಂದು ಮಾಂಸದಂಗಡಿಗಳ ಮಾಲಕರು ಹೇಳುತ್ತಿದ್ದಾರೆ. 

ಕೋಳಿ ಮಾಂಸವನ್ನು ಕೇಳುವವರಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಜಿಲ್ಲೆಯ ಕಡೂರು, ತರೀಕೆರೆ, ಎನ್.ಆರ್.ಪುರ ತಾಲೂಕುಗಳಲ್ಲಿರುವ ಕೋಳಿ ಫಾರ್ಮ್‍ಗಳ ಮಾಲಕರು ಸಿಕ್ಕ ಬೆಲೆಗೆ ಕೋಳಿಗಳನ್ನು ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಯೊಂದಿಗೆ ಕುಕ್ಕುಟೋದ್ಯಮವನ್ನೂ ನಡೆಸುತ್ತಿದ್ದ ನೂರಾರು ರೈತರು ಕೋಳಿ ಧಾರಣೆ ಕುಸಿತದಿಂದ ಕಂಗಾಲಾಗಿದ್ದಾರೆ. ಕೋಳಿ ಮಾಂಸದ ಬೆಲೆ ನೆಲಕಚ್ಚಿದ್ದರೂ ಹೊಟೇಲ್ ಹಾಗೂ ರಸ್ತೆ ಬದಿ ಫಾಸ್ಟ್ ಫುಡ್ ಅಂಗಡಿಗಳಲ್ಲಿ ಕೋಳಿ ಮಾಂಸದ ಕಬಾಬ್, ಪ್ರೈನಂತಹ ಖಾದ್ಯಗಳ ಬೆಲೆ ಕಡಿಮೆಯಾಗಿಲ್ಲ. ಕೋಳಿ ಮಾಂಸದ ಧಾರಣೆ ನೆಲಕಚ್ಚಿರುವ ಮಧ್ಯೆ ಮೀನು ಧಾರಣೆ ಹೆಚ್ಚುತ್ತಿದೆ. ಕುರಿ, ಮೇಕೆ ಮಾಂಸ ಧಾರಣೆಯಲ್ಲಿ ಭಾರೀ ವೆತ್ಯಾಸ ಆಗದ ಕಾರಣ ಮೀನು, ಕುರಿ ಮಾಂಸದಂಗಡಿಗಳ ಮಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕೊರೋನಾ ವೈರಸ್ ಸೋಂಕು ರಾಜ್ಯದಲ್ಲೂ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಸಭೆ ಸಮಾರಂಭ, ಜಾತ್ರೆ, ಮದುವೆಯಂತಹ ಸಾವಿರಾರು ಜನ ಸೇರುವ ಕಾರ್ಯಕ್ರಮಗಳನ್ನು ಮುಂದೂಡಲು ಆದೇಶ ಹೊಡಡಿಸಿದೆ. ಇನ್ನು ಸಾವಿರಾರು ಜನ ಸೇರುವ ಸಭೆ ಸಮಾರಂಭಗಳನ್ನು ರದ್ದು ಮಾಡಲಾಗುತ್ತಿದ್ದು, ನಿಗದಿಯಾಗಿದ್ದ ಜಾತ್ರೆಯಂತಹ ಉತ್ಸವಗಳನ್ನು ನಡೆಸಲು ಜಿಲ್ಲಾಧಿಕಾರಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ವಿಧಿಸಿ ಅನುಮತಿ ನೀಡುತ್ತಿದ್ದಾರೆ. ನೂರಕ್ಕಿಂದ ಹೆಚ್ಚು ಜನ ಸೇರಿಸದೇ ಸರಳವಾಗಿ ಉತ್ಸವ, ಸಭೆ, ಸಮಾರಂಭ ಮಾಡಲು ಅನುಮತಿ ನೀಡಲಾಗುತ್ತಿದೆ. ಇನ್ನು ನಗರದಲ್ಲಿರುವ ನಾಲ್ಕು ಸಿನೆಮಾ ಮಂದಿರಗಳನ್ನು ಕಳೆದ ಶುಕ್ರವಾರದಿಂದಲೇ ಬಂದ್ ಆಗಿದ್ದು, ಸಿನೆಮಾ ಪ್ರಿಯರು ಮನೆಗಳಲ್ಲಿ ಟಿವಿಗಳ ಮೊರೆ ಹೋಗುವಂತಾಗಿದೆ. ಇನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಕೊರೋನಾ ವೈರಸ್ ಶಂಕಿತರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಈ ಸೋಂಕಿನ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ನಗರಸಭೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಎರಡು ಸೋಂಕು ಶಂಕಿತ ಪ್ರಕರಣ: 
ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕು ಪೀಡಿತರು ಕಂಡು ಬಂದಲ್ಲಿ ಚಿಕಿತ್ಸೆ ನೀಡುವ ಸಲುವಾಗಿ 6 ಹಾಸಿಗೆಗಳ ವಿಶೇಷ ವಾರ್ಡ್ ಆರಂಭಿಸಲಾಗಿದ್ದು, ತಜ್ಞ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ವಾರ್ಡ್‍ಗೆ ಮೂಡಿಗೆರೆಗೆ ಬಂದಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಕಳೆದ ಗುರುವಾರ ದಾಖಲಿಸಲಾಗಿತ್ತು. ದುಬೈನಿಂದ ಮಂಗಳೂರಿಗೆ ಬಂದಿದ್ದ ಅವರು, ಮೂಡಿಗೆರೆಯ ಸಹೋದರಿ ಮನೆಗ ಬಂದಿದ್ದ ವೇಳೆ ಶೀತ, ಜ್ವರ ಕಾಣಿಸಿಕೊಂಡಿತ್ತು. ಮೂಡಿಗೆರೆ ಪಟ್ಟಣದಲ್ಲಿ ಖಾಸಗಿ ವೈದ್ಯರ ಸಲಹೆ ಮೇರೆಗೆ ಅವರು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಈ ವೇಳೆ ಜಿಲ್ಲಾಸ್ಪತ್ರೆಯ ವೈದ್ಯರು ವ್ಯಕ್ತಿ ರಕ್ತ ಹಾಗೂ ಕಫವನ್ನು ಹಾಸನದ ಮೆಡಿಕಲ್ ಕಾಲೇಜಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆಂದು ಕಳಿಸಿದ್ದರು. ಶುಕ್ರವಾರ ರಾತ್ರಿ ಈ ವ್ಯಕ್ತಿಯ ವೈದ್ಯಕೀಯ ಪರೀಕ್ಷಾ ವರದಿ ಜಿಲ್ಲಾಧಿಕಾರಿ ಕೈಸೇರಿದ್ದು, ವರದಿಯು ನೆಗೆಟಿವ್ ಎಂದು ದೃಢಪಟ್ಟಿದೆ. ಈ ಮಧ್ಯೆ ನಗರದ ನಿವಾಸಿಯೊಬ್ಬರು ಇತ್ತೀಚಿಗೆ ವಿದೇಶಕ್ಕೆ ಪ್ರವಾಸಕ್ಕೆ ಹೋಗಿ ಹಿಂದಿರುಗಿದ್ದು, ಅವರು ಸ್ವಯಂ ಪ್ರೇರಿತರಾಗಿ ಶನಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಬಂದು ವೈದ್ಯರಿಂದ ತಪಾಸಣೆಗೊಳಗಾಗಿದ್ದಾರೆ. ಕೊರೋನಾ ವೈರಸ್ ಶಂಕೆ ಮೇರೆಗೆ ಅವರ ರಕ್ತ, ಕಫದ ಮಾದರಿಯನ್ನು ಹಾಸನಕ್ಕೆ ಕಳಿಸಲಾಗಿದ್ದು, ವರದಿ ಸೋಮವಾರ ವೈದ್ಯರ ಕೈಸೇರುವ ಸಾಧ್ಯತೆ ಇದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜನರು ಈ ಸೋಂಕಿನ ಭೀತಿಗೊಳಗಾಗಿದ್ದಾರೆ.

ಬಿಕೋ ಎನ್ನುತ್ತಿರುವ ಮದುವೆ ಮನೆಗಳು:
ಕೊರೋನಾ ವೈರಸ್ ಭೀತಿ ಮದುವೆ ಮನೆಗಳನ್ನೂ ಕಾಡುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ ನಿಗದಿಯಾಗಿದ್ದ ಮದುವೆಗಳಿಗೆ ಕೊರೋನಾ ವೈರಸ್ ಹಾಗೂ ಮದುವೆಗಳನ್ನು ಮುಂದೂಡಬೇಕೆಂಬ ಸರಕಾರಿ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರವಿವಾರ ನಗರದ ಕನಕಭವನದಲ್ಲಿ ನಿಗದಿಯಾಗಿದ್ದ ವಿವಾಹ ಕಾರ್ಯಕ್ರಮ ಜನರಿಲ್ಲದೇ ನಡೆಯಿತು. ಮದುವೆ ಕಾರ್ಯಕ್ರಮಕ್ಕಾಗಿ ಹಾಲ್‍ನಲ್ಲಿ ಹಾಕಲಾಗಿದ್ದ ಖುರ್ಚಿಗಳು ಖಾಲಿಯಾಗಿದ್ದವು. ಮದುವೆಗಾಗಿ ಅದ್ದೂರಿ ಸೆಟ್ ಹಾಕಲಾಗಿತ್ತಾದರೂ ಹಾಲ್‍ನಲ್ಲಿ ಕೆಲವೇ ಜನರು ಕಂಡು ಬಂದರು. ಇನ್ನು ಮೂಡಿಗೆರೆಯಲ್ಲೂ ರವಿವಾರ ರವಿವಾರ ನಿಗದಿಯಾಗಿದ್ದ ಅದ್ದೂರಿ ಮದುವೆಯೊಂದು ಅತ್ಯಂತ ಸರಳವಾಗಿ ನಡೆದ ಬಗ್ಗೆ ವರದಿಯಾಗಿದೆ. ಮಾ.19ರಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮಗಳ ಮದುವೆ ಸಮಾರಂಭ ಚಿಕ್ಕಮಗಳೂರು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಸಲು ನಿಗದಿಯಾಗಿತ್ತು. ಆದರೆ ಸರಕಾರಿ ಆದೇಶದ ಹಿನ್ನೆಲೆಯಲ್ಲಿ ಮದುವೆ ಸ್ಥಳವನ್ನು ರದ್ದು ಮಾಡಿದ್ದು, ವಿವಾಹ ಕಾರ್ಯಕ್ರಮವನ್ನು ರಾಜೇಗೌಡ ಅವರ ಮನೆಯಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಮಾ.21ಕ್ಕೆ ನಗರದಲ್ಲಿ ನಿಗದಿಯಾಗಿದ್ದ ಈ ಮದುವೆಯ ಔತಣಕೂಟವನ್ನೂ ರದ್ದು ಮಾಡಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X