ಮಲ್ಪೆ ಸೈಂಟ್‌ಮೇರಿಸ್‌ನಲ್ಲಿ ಸ್ಲಾಕ್ಲಿನಿಂಗ್ ಸಾಹಸ ಕ್ರೆಡೆ ಪ್ರಯೋಗ

ಮಲ್ಪೆ, ಮಾ.15: ಮಲ್ಪೆ ಅಭಿವೃದ್ದಿ ಸಮಿತಿಯ ವತಿಯಿಂದ ಸ್ಲಾಕ್ ಮಿತ್ರ ಸಂಸ್ಥೆಯ ಸಹಯೋಗದಲ್ಲಿ ಸ್ಲಾಕ್ಲಿನಿಂಗ್ ಎಂಬ ಸಾಹಸ ಕ್ರೆಡೆಯ ಪ್ರಯೋಗಾರ್ಥ ಪ್ರದರ್ಶನವನ್ನು ಮಲ್ಪೆಯ ಸೈಂಟ್‌ಮೇರಿಸ್ ದ್ವೀಪದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಈ ಸ್ಲಾಕ್ಲಿನಿಂಗ್ ಕ್ರೀಡೆಯಲ್ಲಿ ಸಮುದ್ರದ ನೀರಿನ ಮೇಲೆ ಸಮಾನಂತರವಾಗಿ, ಎರಡು ಎತ್ತರದ ಕಂಬಗಳಿಗೆ ಕಟ್ಟಲಾಗಿರುವ ಹಗ್ಗದಂತಹ ಹಿರಿದಾದ ಪಟ್ಟಿಯ ಮೇಲೆ ದೇಹದ ಸಮತೋಲನವನ್ನು ಕಾಪಾಡಿಕೊಂಡು ನಡೆದುಕೊಂಡು ಹೋಗುವ ಮೂಲಕ ಸಾಹಸ ಮೆರೆಯಲಾಗುತ್ತದೆ.
ಸ್ಲಾಕ್ ಮಿತ್ರ ಸಂಸ್ಥೆಯ ನವೀನ್ ದೇವಾನಾನಿ, ಅಧ್ವೈತ್ ಮನೋಹರ್, ಕ್ಷಿತಿಜ್ ಮಿತ್ತಲ್ ಮತುತಿ ವಿನಯ ಟಟರಿಯಾ ಪ್ರದರ್ಶನದ ಪ್ರಾತ್ಯಕ್ಷಿಕೆ ನಡೆಸಿದರು. ಸೈಂಟ್‌ಮೇರಿಸ್ ದ್ವೀಪದ ಭೌಗೋಳಿಕ ವಿಸ್ಮಯವನ್ನು ಮತ್ತು ಅಲ್ಲಿನ ಸಾಹಸ ಕ್ರೀಡೆಗಳನ್ನು ನಡೆಸಲು ಇರುವ ಅವಕಾಶಗಳನ್ನು ಪ್ರಚಾರಗೊಳಿ ಸುವುದಕ್ಕಾಗಿ ಈ ಸ್ಲಾಕ್ಲಿನಿಂಗ್ ಪ್ರದರ್ಶನವನ್ನು ಆಯೋಜಿಸ ಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಪ್ರದರ್ಶನದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರೀತಿ ಗೆಹ್ಲೋತ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಮಲ್ಪೆ ಅಭಿವೃದ್ದಿ ಸಮಿತಿು ಸುದೇಶ್ ಶೆಟ್ಟಿ ಪಾಲ್ಗೊಂಡಿದ್ದರು.





