ತೆಂಕನಿಡಿಯೂರು: ಕಾಂಗ್ರೆಸ್ ಕಾರ್ಯಕರ್ತರ ಸಭೆ

ಮಲ್ಪೆ, ಮಾ.15: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಭಾವಿಯಾಗಿ ತೆಂಕನಿಡಿಯೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ತೆಂಕನಿಡಿಯೂರಿನಲ್ಲಿ ಜರಗಿತು.
ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಜಿಪಂನಿಂದ ಬರಬೇಕಾದ ಎಲ್ಲ ಅನುದಾನವನ್ನು ಸಮರ್ಪಕ ರೀತಿಯಲ್ಲಿ ನೀಡಿದ್ದೇನೆ. ಈಗ ಈ ಗ್ರಾಮದ ರುದ್ರಭೂಮಿಗೆ 2 ಲಕ್ಷ ರೂ. ಅನುದಾನ ನೀಡಲಾಗಿದೆ. ಪ್ರತಾಪ್‌ಚಂದ್ರ ಶೆಟ್ಟಿ ಅವರ ವಿಧಾನ ಪರಿಷತ್ ನಿಧಿಯ ಅನುದಾನ ಕೂಡ ಇಲ್ಲಿನ ರುದ್ರಭೂಮಿಗೆ ನೀಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕಾಂಗ್ರೆಸ್ ಪಕ್ಷದ ಇಂದಿನ ಕೆಲವು ಪ್ರಮುಖ ಕಾರ್ಯಕ್ರಮಗಳಿಂದಾಗಿ ಪಕ್ಷವು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತ್ತೆ ಎಲ್ಲ ಗ್ರಾಮ ಪಂಚಾಯತ್‌ಗಳು ಗೆದ್ದು ಬರಲಿದೆ ಎಂದು ಆಶಯ ವ್ಯಕ್ತಪಡಿಸಿ ದರು.
ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ರಾವ್ ಕಿದಿಯೂರು, ಜಯಾನಂದ, ಜನಾರ್ದನ್ ಭಂಡಾರ್‌ಕಾರ್, ಗೋಪಾಲ್‌ಕೃಷ್ಣ ಶೆಟ್ಟಿ, ಧನಂಜಯ್ ಕುಂದರ್, ಪೃಥ್ವಿರಾಜ್ ಶೆಟ್ಟಿ, ಸತೀಶ್ ನಾಯಕ್, ಭವಾನಿ ಪೂಜಾರಿ, ಲತಾ ಅಂಚನ್, ಕೃಷ್ಣ ಎಸ್. ಅಮೀನ್, ಮಮತಾ ಶೆಟ್ಟಿ, ಸಂಪತ್ ಶೆಟ್ಟಿ, ವಸಂತ್ ಪ್ರಭಾಕರ್ ಅಂಚನ್, ಶಶಿಧರ್, ವಿಲ್ಫ್ರೆಡ್, ಸುರೇಶ್ ಕುಮಾರ್, ಶರತ್ ಶೆಟ್ಟಿ, ಗೋಪಾಲ್ ಗಾಣಿಗ, ನಾರಾಯಣ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.







