ತಮಿಳುನಾಡು: ಕಿಂಡರ್ ಗಾರ್ಟನ್, ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 31ರ ವರೆಗೆ ರಜೆ

ಚೆನ್ನೈ: ರಾಜ್ಯಾದ್ಯಂತ ಕಿಂಡರ್ ಗಾರ್ಟನ್ ಹಾಗೂ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 31ರ ವರೆಗೆ ರಜೆ ಘೋಷಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಆದೇಶ ಹೊರಡಿಸಿದ್ದಾರೆ.
ನೆರೆಯ ರಾಜ್ಯಗಳೊಂದಿಗೆ ಗಡಿ ಹಂಚಿಕೊಳ್ಳುವ ತಾಲೂಕುಗಳಲ್ಲಿ ಮಾಲ್ ಹಾಗೂ ಸಿನೆಮಾ ಮಂದಿರಗಳನ್ನು ಮಾರ್ಚ್ 31ರ ವರೆಗೆ ಮುಚ್ಚುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವ ಆರಾಧನಾ ಸ್ಥಳ, ಸಿನೆಮಾ ಮಂದಿರ, ವಾಣಿಜ್ಯ ಸಂಕೀರ್ಣಗಳಂತಹ ಸ್ಥಳಗಳಲ್ಲಿ ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ.
ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಜನರ ಸಹಕಾರ ಕೋರಿರುವ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಕೊರೋನ ವೈರಸ್ ಸೋಂಕಿನ ಲಕ್ಷಣ ಹೊಂದಿರುವವರು ಕೂಡಲೇ ಸಮೀಪ ಇರುವ ಸರಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ.
Next Story





