ಮಂಗಳೂರು, ಮಾ.15: ಇಡೀ ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೋನ ಸೋಂಕಿನ ಸಂಕಟದಿಂದ ಜನತೆಯನ್ನು ಪಾರುಮಾಡುವಂತೆ ಮಂದಾರ ಬೈಲು ಶ್ರೀ ವೆಂಕಟರಮಣ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಪ್ರ ಸಮೂಹ ಕೊಂಚಾಡಿ, ಶಿವಳ್ಳಿ ಸ್ಪಂದನ ದೇರೆಬೈಲು ಹಾಗೂ ಗ್ರಾಮಸ್ಥರು ಸೇರಿ ರವಿವಾರ ಬೆಳಗ್ಗೆ ಸಾಮೂಹಿಕ ಪಾರಾಯಣ ನಡೆಸಲಾಯಿತು.