ಕೊರೋನಾ ವೈರಸ್ ಭೀತಿ: ಕುಕ್ಕುಟೋದ್ಯಮಕ್ಕೆ ಸಾವಿರ ಕೋಟಿ ರೂ. ಗೂ ಹೆಚ್ಚು ನಷ್ಟ!

ಬೆಂಗಳೂರು, ಮಾ.15: ಕೊರೋನಾ ವೈರಸ್ ಭೀತಿಯು ಕುಕ್ಕುಟೋದ್ಯಮದ ಮೇಲೆ ಭಾರೀ ಪರಿಣಾಮ ಬೀರಿದ್ದು, ಉದ್ಯಮದ ಮೇಲೆ ಸುಮಾರು ಒಂದು ಸಾವಿರ ಕೋಟಿ ರೂ. ಗೂ ಹೆಚ್ಚು ನಷ್ಟ ಉಂಟು ಮಾಡಿದೆ ಎನ್ನಲಾಗುತ್ತಿದೆ.
ಕೋಳಿಮಾಂಸ ತಿಂದರೆ ಕೊರೋನಾ ಬರುತ್ತದೆ ಎಂಬ ವದಂತಿ ಹರಡಿರುವ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಲವೆಡೆ ಕೋಳಿ ಮಾರಾಟ ಸಂಪೂರ್ಣವಾಗಿ ನಿಂತ ಹಿನ್ನೆಲೆಯಲ್ಲಿ ವರ್ತಕರು ಕಡಿಮೆ ಬೆಲೆಗೆ ಕೋಳಿ ಮಾರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವೆಡೆ ಕೋಳಿ ಸಾಕಾಣಿಕೆದಾರರು ನಷ್ಟ ಸರಿದೂಗಿಸಲಾಗದೆ ಸಾಮೂಹಿಕವಾಗಿ ಕೋಳಿಗಳನ್ನು ಹತ್ಯೆ ಮಾಡುತ್ತಿದ್ದಾರೆ.
ಕೋಲಾರದ ಹಲವು ತಾಲೂಕುಗಳಲ್ಲಿ ಕೋಳಿ ಫಾರಂಗಳಲ್ಲಿ ಕೋಳಿಗಳನ್ನು ಸಾಕಲಾರದೆ ಗುಂಡಿ ತೋಡಿ ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು.
ಬೆಳಗಾವಿಯ ಅಥಣಿಯಲ್ಲಿ ಸಾವಿರಾರು ಕೋಳಿಗಳನ್ನು ಈ ರೀತಿ ಮಾಡಲಾಯಿತು. ಬೆಳಗಾವಿಯ ಚಿಕ್ಕೋಡಿಯಲ್ಲಿ ಸಾವಿರಾರು ಕೋಳಿಗಳನ್ನು ವ್ಯಾಪಾರಸ್ಥರು ಉಚಿತವಾಗಿ ವಿತರಿಸಿದ್ದಾರೆ.
Next Story





