ಮಾಂಸದ ತ್ಯಾಜ್ಯದಿಂದ ನದಿ ಮಲೀನ: ಪ್ರಕರಣ ದಾಖಲು
ಮಲ್ಪೆ, ಮಾ.15: ಮಾಂಸದ ತ್ಯಾಜ್ಯಗಳನ್ನು ನದಿಗೆ ಹಾಕಿ ಕಲುಷಿತಗೊಳಿಸಿರುವವರ ವಿರುದ್ದ ಪಡುತೋನ್ಸೆ ಗ್ರಾಮದ ಪಿಡಿಓ ಕಮಲ ನೀಡಿದ ದೂರಿನಂತೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೂಡೆಯ ಅಮ್ಚಿ ಚಿಕನ್ ಸ್ಟಾಲ್ ಮಾ.13ರಂದು ಕಂಬಳತೋಟದಲ್ಲಿರುವ ಸುವರ್ಣ ನದಿಗೆ ಮಾಂಸದ ತ್ಯಾಜ್ಯಗಳನ್ನು ಗೋಣಿ ಚೀಲಗಳ ಮೂಲಕ ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರು. ಈ ಬಗ್ಗೆ ಸಾರ್ವಜನಿಕರು ವಿಡಿಯೋ ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಇವರು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ ನದಿಯ ನೀರನ್ನು ಮಲೀನಗೊಳಿಸಿ ಸಾರ್ವಜನಿಕರ ಸಾಮಾನ್ಯ ಆರೋಗ್ಯಕ್ಕೆ ಹಾನಿಕರ ಆಗುವಂತೆ ಮಾಂಸದ ತ್ಯಾಜ್ಯಗಳನ್ನು ನದಿಗೆ ಹಾಕಿ ಕಲುಷಿತಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





