ಪರ್ಯಾಯ ಅದಮಾರು ಮಠಕ್ಕೆ ಹೊರೆಕಾಣಿಕೆ ಅರ್ಪಣೆ

ಉಡುಪಿ, ಮಾ.15: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಅದಮಾರು ಮಠಕ್ಕೆ ಎಲ್ಲೂರು, ಕೇಂಮುಂಡೇಲು, ಪಣಿಯೂರು, ಉಚ್ಚಿಲ, ಅದಮಾರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೊರೆ ಕಾಣಿಕೆಯನ್ನು ರವಿವಾರ ಅರ್ಪಿಸಿದರು.
ಉಚ್ಚಿಲ, ಎರ್ಮಾಳು ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಸೀತಾರಾಮ ಭಟ್, ಜನಾರ್ದನ ರಾವ್, ರವಿ ಭಟ್, ಉಚ್ಚಿಲ ದೇವಳದ ದ್ಯುಮಣಿ ಭಟ್, ಉದಯ ಶೆಟ್ಟಿ, ಮಹಾಲಕ್ಷ್ಮಿ ದೇವಳದ ರಾಘವೇಂದ್ರ ಉಪಾದ್ಯಾಯ, ಕುಂಜೂರಿನ ಚಕ್ರಪಾಣಿ ಉಡುಪ, ರಾಮಕೃಷ್ಣ ರಾವ್, ಶ್ರೀಧರ ಭಟ್, ಅದಮಾರಿನ ವಾಸುದೇವ ಮಂಜಿತ್ತಾಯ, ಎರ್ಮಾಳು ಮೊಗವೀರ ಮಹಾ ಸಭಾದ ದಾಮೋದರ ಸುವರ್ಣ ನೇತೃತ್ವದಲ್ಲಿ ನಗರದ ಸಂಸ್ಕೃತ ಕಾಲೇಜಿನಿಂದ ಮೆರವಣಿಗೆಯಲ್ಲಿ ಹೊರೆಕಾಣಿಕೆ ತರಲಾಯಿತು.
ಹೊರೆ ಕಾಣಿಕೆ ನೀಡಿದ ಭಕ್ತಾಧಿಗಳಿಗೆ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ನಂತರ ಉಚ್ಚಿಲ ವಿಪ್ರ ಮಹಿಳೆಯರಿಂದ ’ಭೂಕೈಲಾಸ’ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
Next Story





