ಮೈಸೂರು: ಮಹಿಳೆ ಕೊಲೆ; ನಾಲ್ವರ ಬಂಧನ
ಮೈಸೂರು, ಮಾ.15: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮನಗಹಳ್ಳಿ ಗ್ರಾಮದ ನಿವಾಸಿ ರಾಜಮ್ಮ(42)ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಕ್ರಮ ಸಂಬಂಧದಿಂದಾಗಿ ಮಹಿಳೆಯ ಕೊಲೆ ನಡೆದಿದೆ ಎನ್ನಲಾಗಿದೆ. ನಾಪತ್ತೆ ಪ್ರಕರಣದ ಬೆನ್ನತ್ತಿದ ಪೊಲೀಸರು ಮಹಿಳೆಯನ್ನು ಕೊಲೆ ಮಾಡಿದ ಹಾಗೂ ಕೊಲೆಗೆ ಸಹಕಾರ ನೀಡಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹೇಶ್ (34), ಸೋಮ(34), ಹೆಮ್ಮಿಗೆ ಗ್ರಾಮದಚೌಡಯ್ಯ(58), ಅಕ್ಕೂರುದೊಡ್ಡಿ ಗ್ರಾಮದ ಮಹದೇವ (50) ಬಂಧಿತ ಆರೋಪಿಗಳು ಎನ್ನಲಾಗಿದೆ. ಈಗಾಗಲೇ ಚೌಡಯ್ಯ ಹಾಗೂ ಮಹದೇವ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
Next Story





