Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೊರೋನ ವೈರಸ್: ಪಲಾಯನ ಸರಿಯೇ?

ಕೊರೋನ ವೈರಸ್: ಪಲಾಯನ ಸರಿಯೇ?

ವಾರ್ತಾಭಾರತಿವಾರ್ತಾಭಾರತಿ15 March 2020 11:55 PM IST
share
ಕೊರೋನ ವೈರಸ್: ಪಲಾಯನ ಸರಿಯೇ?

ಶತ್ರುಗಳು ನಾಡಿನೊಳಗೆ ಕಾಲಿಟ್ಟಾಗಿರುವಾಗ, ನಾವು ಮನೆಯೊಳಗೆ ಅವಿತು ಕೂತು ಅದನ್ನು ಎದುರಿಸುವುದು ಸಾಧ್ಯವಿಲ್ಲ. ಸೂಕ್ತ ಆಯುಧಗಳ ಜೊತೆಗೆ ನಾಯಕನಾದವನು ಯೋಧರನ್ನು ಸಂಘಟಿಸಿ ಅವರನ್ನು ಎದುರಿಸುವುದೊಂದೇ ದಾರಿ. ಮನೆಯೊಳಗೆ ಕುಳಿತು ‘ಶತ್ರು ಇಂದು ಹೋಗುತ್ತಾನೆ, ನಾಳೆ ಹೊರಡುತ್ತಾನೆ’ ಎಂದು ಎಷ್ಟು ದಿನ ಕಾಯಬಹುದು? ರಾಜ್ಯದಲ್ಲಿ ಕೊರೋನ ವೈರಸ್ ಎನ್ನುವ ಶತ್ರುವನ್ನು, ಎದುರಿಸುವ ಬದಲು ಸರಕಾರ ಪಲಾಯನ ತಂತ್ರವನ್ನು ಅನುಸರಿಸುತ್ತಿದೆಯೇ? ಎನ್ನುವ ಪ್ರಶ್ನೆ ವಿವಿಧ ವಲಯಗಳಿಂದ ಕೇಳಿ ಬರುತ್ತಿವೆ. ಚೀನಾದಲ್ಲಿ ಕೊರೋನ ವ್ಯಾಪಕವಾಗುತ್ತಿದ್ದ ಹಾಗೆಯೇ ಹತ್ತೇ ದಿನಗಳಲ್ಲಿ ಕೊರೋನ ಸೋಂಕಿತರಿಗಾಗಿಯೇ ಬೃಹತ್ ಆದ ವಿಶೇಷ ಆಸ್ಪತ್ರೆಯೊಂದನ್ನು ನಿರ್ಮಿಸಲಾಯಿತು. ಅಲ್ಲಿ ಬೇರೆ ರೋಗಿಗಳಿಗೆ ಅವಕಾಶವೇ ಇಲ್ಲ. ತನ್ನ ನಾಡಿನಲ್ಲೇ ಹುಟ್ಟಿದ ಕೊರೋನವನ್ನು ಚೀನಾ ಎಷ್ಟು ವ್ಯವಸ್ಥಿತವಾಗಿ ಎದುರಿಸಿತು ಎಂದರೆ, ಇಂದು ವಿವಿಧ ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವಾಗ ಚೀನಾದಲ್ಲಿ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ತಾನೇ ಸೃಷ್ಟಿಸಿಕೊಂಡ ಪ್ರಮಾದವನ್ನು, ಅಷ್ಟೇ ಪರಿಣಾಮಕಾರಿಯಾಗಿ ಎದುರಿಸಿ ಅದರಲ್ಲಿ ಗೆಲ್ಲುವ ಹಂತದಲ್ಲಿದೆ ಚೀನಾ. ಬಹುಶಃ ಭಾರತದಂತಹ ದೇಶದಲ್ಲಿ ಇಂತಹದೊಂದು ವೈರಸ್ ಹುಟ್ಟಿ ಅದು ಜನರನ್ನು ಬಲಿತೆಗೆದುಕೊಳ್ಳುತ್ತಿದ್ದರೆ ನಮ್ಮ ಸ್ಥಿತಿ ಚಿಂತಾಜನಕವಾಗಿ ಬಿಡುತ್ತಿತ್ತೇನೋ?

ನೂರು ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಭಾರತದಲ್ಲಿ ಈವರೆಗೆ ಪತ್ತೆಯಾದ ಒಟ್ಟು ಪ್ರಕರಣಗಳು 100. ಕರ್ನಾಟಕದಲ್ಲಿ ಅಧಿಕೃತವಾಗಿ ಆರು ಕೊರೋನ ಸೋಂಕಿತರನ್ನಷ್ಟೇ ಗುರುತಿಸಲಾಗಿದೆ. ಉಳಿದವರೆಲ್ಲೂ ಶಂಕಿತರು. ಅವರೊಳಗೆ ಕೊರೋನ ಇರುವುದು ಇನ್ನೂ ಸಾಬೀತಾಗಿಲ್ಲ. ಅಂದರೆ ಕರ್ನಾಟಕ ಇನ್ನೂ ಸೋಂಕಿನ ಆರಂಭದ ಹಂತದಲ್ಲಿದೆ. ಇದೀಗ ಸರಕಾರ ರಾಜ್ಯದಲ್ಲಿ ಅನಧಿಕೃತ ಬಂದ್ ಘೋಷಣೆ ಮಾಡಿದೆ. ಆದರೆ ಹೀಗೆ ಬಂದ್ ಮಾಡುವ ಮೂಲಕ ಕೊರೋನವನ್ನು ಶಾಶ್ವತವಾಗಿ ತಡೆಯುವುದಕ್ಕೆ ಸಾಧ್ಯವೇ? ಯಾಕೆಂದರೆ ಕೊರೋನಾ ಒಂದು ವೈರಸ್. ಅದು ಈಗ ನಮ್ಮ ನಡುವೆ ಸೇರಿಕೊಂಡಾಗಿದೆ. ಒಂದು ವರ್ಷ ಈ ಬಂದ್ ಮುಂದುವರಿದರೂ, ವೈರಸ್ ಹರಡದಂತೆ ತಡೆಯಬಹುದೇ ಹೊರತು, ಅದನ್ನು ನಾಶ ಮಾಡಲು ಸಾಧ್ಯವಿಲ್ಲ. ಜನರು ಒಂದಲ್ಲ ಒಂದು ದಿನ ಮನೆಯಿಂದ ಹೊರ ಬರಲೇ ಬೇಕು. ಮಾಲ್‌ಗಳು, ಚಿತ್ರಮಂದಿರಗಳು, ಮದುವೆ ಸಭಾಂಗಣಗಳು ತೆರೆಯಲೇ ಬೇಕು. ಆಗ ವೈರಸ್ ಮತ್ತೊಮ್ಮೆ ಯಾವ ರೂಪದಲ್ಲಾದರೂ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದುದರಿಂದ, ಈ ಆರಂಭ ಹಂತದ ಸಮಯವನ್ನು ಸರಕಾರ ಸದುಪಯೋಗ ಪಡಿಸಿಕೊಂಡು ವೈರಸ್ ವಿರುದ್ಧ ಯೋಜನೆಗಳನ್ನು ರೂಪಿಸಬೇಕು. ಮೊತ್ತ ಮೊದಲನೆಯದಾಗಿ ತಳ ಹಂತದಿಂದ ಕೆಮ್ಮು, ನೆಗಡಿಯಂತಹ ರೋಗಿಗಳನ್ನು ಗುರುತಿಸುವ ಕೆಲಸವನ್ನು ಮಾಡುವುದು ಮತ್ತು ಅವರಲ್ಲಿ ಜಾಗೃತಿಯನ್ನು ಬಿತ್ತುವುದು. ಆದರೆ ಇಂದು ಸರಕಾರ ಮತ್ತು ಮಾಧ್ಯಮಗಳು ಜಾಗೃತಿಯ ಬದಲಿಗೆ ಆತಂಕಗಳನ್ನು ಬಿತ್ತುತ್ತಿವೆ. ಇದರಿಂದಾಗಿ ಕೆಮ್ಮು, ನೆಗಡಿಯಂತಹ ಮಾಮೂಲಿ ಕಾಯಿಲೆಯಿರುವವರೂ ಆಸ್ಪತ್ರೆಗಳ ಮೆಟ್ಟಿಲು ಹತ್ತುವುದು ಕಷ್ಟವಾಗಿದೆ.

ವೈದ್ಯರ ವರ್ತನೆಗಳು ಕೂಡ ರೋಗಿಗಳನ್ನು ಕಂಗಾಲು ಮಾಡಿವೆ. ಹಲವು ಆಸ್ಪತ್ರೆಗಳಲ್ಲಿ ವೈದ್ಯರೇ ರೋಗಿಗಳಿಗೆ ಹೆದರಿ ಮನೆಯಲ್ಲಿ ಕುಳಿತುಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಆದುದರಿಂದ ಆಸ್ಪತ್ರೆಗಳು ಮತ್ತು ವೈದ್ಯರ ಮೂಲಕವೇ ಸರಕಾರದ ಕಾರ್ಯಯೋಜನೆ ಆರಂಭಗೊಳ್ಳಬೇಕು. ಸೋಂಕು ತನ್ನಲ್ಲಿದೆ ಎಂದು ಯಾರಿಗಾದರೂ ಅನುಮಾನ ಬಂದರೆ ಅದನ್ನು ತಕ್ಷಣ ಮನೆಯವರಿಗೆ ತಿಳಿಸುವುದು ಮತ್ತು ತನ್ನ ಬಾಯಿಯ ದ್ರವ ಹೊರ ಹರಡದಂತೆ ನೋಡಿಕೊಳ್ಳಬೇಕು. ಆ ಬಳಿಕ ಸರಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು. ಹಾಗೆಯೇ ಈ ಸೋಂಕುಳ್ಳವರನ್ನು ಜನಸಂದಣಿ ಇರುವ ಪ್ರದೇಶಗಳಿಗೆ ಕಳುಹಿಸದಂತೆ ಆಯಾ ಮನೆಯವರೇ ಜಾಗೃತೆ ವಹಿಸಿದರೆ ಅರ್ಧ ಕೆಲಸ ಮುಗಿಯಿತು. ಇನ್ನು ಉಳಿದಂತೆ ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳು. ‘ಜನರನ್ನು ಅಲ್ಲಿಗೆ ತೆರಳಬೇಡಿ, ಇಲ್ಲಿಗೆ ತೆರಳಬೇಡಿ’ ಎಂದು ಹೇಳುವ ಸರಕಾರ, ಈ ವೈರಸ್‌ಗಳನ್ನು ಸಾರ್ವಜನಿಕವಾಗಿ ತಡೆಯಲು ತಾನು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಮೊತ್ತ ಮೊದಲಾಗಿ, ಆಸ್ಪತ್ರೆಗಳಲ್ಲೇ ಈ ಸೋಂಕು ಹರಡುವ ಸಾಧ್ಯತೆಗಳಿವೆ. ಈ ಭಯದಿಂದಲೇ ವೈದ್ಯರೂ ರೋಗಿಗಳ ಜೊತೆಗೆ ಸೂಕ್ತವಾಗಿ ಸ್ಪಂದಿಸಲು ಹೆದರುತ್ತಿದ್ದಾರೆ. ಇಂದು ಮಹಾನಗರಗಳ ಪ್ರಮುಖ ಆಸ್ಪತ್ರೆಗಳನ್ನು ಹೊರತು ಪಡಿಸಿದರೆ, ಉಳಿದೆಡೆ ರೋಗಿಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ಕೊಡುವ ವ್ಯವಸ್ಥೆ ತೀರಾ ಕಡಿಮೆ.

ಕೊರೋನ ವೈರಸ್ ಪೀಡಿತರಿಗಾಗಿ ಪ್ರತ್ಯೇಕ ಕಟ್ಟಡಗಳನ್ನು ಒದಗಿಸುವ ಅಗತ್ಯವಿದೆ. ಹಾಗೆಯೇ ಎಲ್ಲ ಮಾಲ್‌ಗಳಿಗೆ, ಚಿತ್ರ ಮಂದಿರಗಳಿಗೆ ಬರುವ ಗ್ರಾಹಕರ ಜೊತೆ ಮುಂಜಾಗೃತೆ ಹೇಗೆ ವಹಿಸಬೇಕು ಇತ್ಯಾದಿ ನಿಯಮಾವಳಿಗಳನ್ನು ರೂಪಿಸಬೇಕು. ಇಂತಹ ಮಾಲ್‌ಗಳ ಒಳಗೆ ಪ್ರವೇಶಿಸುವ ಗ್ರಾಹಕರನ್ನು ಪರೀಕ್ಷಿಸುವ ಹಾಗೂ ಅವರ ಕೈ ಶುಚಿಗೊಳಿಸುವ ವ್ಯವಸ್ಥೆಯನ್ನು ಅಳವಡಿಸಬೇಕು. ಸಾಧ್ಯವಾದರೆ ಎಲ್ಲ ನಗರಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕಿರು ಮೊಬೈಲ್ ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡಬಹುದು. ಹಾಗೆಯೇ ಸೋಂಕಿತರಿಗೆ ಮತ್ತು ಆ ಪರಿಸರದಲ್ಲಿದ್ದವರಿಗೆ ಉಚಿತ ಅಥವಾ ಸಬ್ಸಿಡಿಯಲ್ಲಿ ಮುಖ ಕವಚದ ಜೊತೆಗೆ ಇನ್ನಿತರ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಬೇಕು. ಎಲ್ಲ ಮಾಲ್‌ಗಳು, ಅಂಗಡಿಗಳು, ಚಿತ್ರಮಂದಿರಗಳಲ್ಲಿ ರಾಸಾಯನಿಕ ಔಷಧಿಯ ಮೂಲಕ ಗಂಟೆಗಳಿಗೊಮ್ಮೆ ಶುಚಿಗೊಳಿಸುವ ಕುರಿತು ಕಟ್ಟು ನಿಟ್ಟಿನ ಆದೇಶ ನೀಡಬೇಕು. ಇದರ ಬದಲಿಗೆ ಇಡೀ ರಾಜ್ಯಕ್ಕೆ ಬೀಗ ಜಡಿಯುವುದರಿಂದ ವೈರಸ್‌ನ್ನು ಸೋಲಿಸಲಾಗುವುದಿಲ್ಲ. ಇಂತಹ ‘ಬಂದ್’ ಅದೆಷ್ಟು ಅವಾಸ್ತವಿಕವಾದುದು ಎನ್ನುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆಯಿಂದಲೇ ಬಯಲಾಗಿದೆ. ಯಾವುದೇ ಬೃಹತ್ ಮದುವೆ ಸಮಾರಂಭಗಳನ್ನು ಹಮ್ಮಿಕೊಳ್ಳಬಾರದು ಎಂಬ ಆದೇಶವನ್ನು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ನೀಡಿದ್ದಾರೆ. ಇದೀಗ ರವಿವಾರ ಅವರದೇ ಪಕ್ಷದ ಶಾಸಕರೊಬ್ಬರು ಬೃಹತ್ ಮದುವೆ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಅಂದರೆ ಮುಖ್ಯಮಂತ್ರಿಯ ಆದೇಶವನ್ನು ಅವರದೇ ಪಕ್ಷದ ಜನಪ್ರತಿನಿಧಿ ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲ, ತಾವು ನೀಡಿದ ಆದೇಶವನ್ನು ಸ್ವತಃ ಮುಖ್ಯಮಂತ್ರಿಯೇ ಉಲ್ಲಂಘಿಸಿದ್ದಾರೆ. ಆ ಮದುವೆಗೆ ಯಡಿಯೂರಪ್ಪ ಖುದ್ದಾಗಿ ಹಾಜರಾಗಿ ವಧುವರರನ್ನು ಆಶೀರ್ವದಿಸಿ ಬಂದಿದ್ದಾರೆ. ಇದನ್ನು ನಾಡಿನ ಜನತೆ ಹೇಗೆ ಸ್ವೀಕರಿಸಬೇಕು? ಕೊರೋನ ಕುರಿತಂತೆ ಮುಖ್ಯಮಂತ್ರಿಯೇ ಇಷ್ಟೊಂದು ಬೇಜವಾಬ್ದಾರಿಯಾಗಿ ವರ್ತಿಸಿರುವಾಗ ಜನರು ಅವರ ಆದೇಶವನ್ನು ಗಂಭೀರವಾಗಿ ಸ್ವೀಕರಿಸುತ್ತಾರೆಯೇ? ಅಥವಾ ಶ್ರೀಸಾಮಾನ್ಯರು ಮಾತ್ರ ಮದುವೆ ಸಮಾರಂಭಗಳಿಂದ, ಮಾಲ್‌ಗಳಿಂದ ಚಿತ್ರಮಂದಿರದಿಂದ ದೂರವಿರಬೇಕು ಎಂದು ಬಯಸುತ್ತಿದ್ದಾರೆಯೆ? ಆದುದರಿಂದ ಕೊರೋನ ವೈರಸ್‌ನಿಂದ ಸರಕಾರ ಪಲಾಯನ ಮಾಡುವುದನ್ನು ನಿಲ್ಲಿಸಲಿ. ವಾಸ್ತವ ನೆಲೆಯಲ್ಲಿ ಅದನ್ನು ಎದುರಿಸುವ ಯೋಜನೆಗಳಿಗೆ ಇನ್ನಾದರೂ ಅಡಿಗಲ್ಲನ್ನು ಹಾಕಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X