ಹೂಡೆ ಸಾಲಿಹಾತ್‌ನಲ್ಲಿ ಕೊರೋನ ಬಗ್ಗೆ ಮಾಹಿತಿ ಕಾರ್ಯಾಗಾರ

ಉಡುಪಿ, ಮಾ.16: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಕೊರೋನ ವೈರಸ್ ರೋಗದ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕೊರೋನ ರೋಗದ ಕುರಿತು ಮಾಹಿತಿ ನೀಡಿದ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ವೈದ್ಯ ಡಾ. ಫಹೀಮ್ ಗುಜ್ಜರ್‌ಬೆಟ್ಟು, ಮಹಾ ಸಾಂಕ್ರಾಮಿಕ ರೋಗವಾಗಿರುವ ಕೊರೋನ ವೈರಸ್ ಬಗ್ಗೆ ನಾವೆಲ್ಲರೂ ಜಾಗೃತರಾಗಿರಬೇಕಾದ ಅಗತ್ಯ ಇದೆ. ಶೀತ, ಜ್ವರ, ಕೆಮ್ಮು ಲಕ್ಷಣ ಇರುವವರು ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಕೆಮ್ಮುವಾಗ ಇನ್ನೊಬ್ಬರಿಗೆ ತೊಂದರೆ ಯಾಗದ ರೀತಿಯಲ್ಲಿ ಸುರಕ್ಷಾ ಕ್ರಮ ಅಳವಡಿಸಿಕೊಳ್ಳುವುದು ಸೂಕ್ತ ಎಂದರು.
ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪ್ರಾಂಶು ಪಾಲೆ ಡಾ.ಶಬೀನಾ ಹಾವೇರಿಪೇಟ್, ಕಾಲೇಜು ಪ್ರತಿನಿಧಿ ಶಗುಫ್ತಾ, ರಾಫಿಯಾ ಬಳ್ಳಾರಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿ ಶಾಹಾಜಿನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ನೀಹಾ ಪರ್ವೀನ್ ವಂದಿಸಿದರು.
Next Story





