ತುಳುನಾಡಿನಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ: ಜ್ಯೋತಿ ಚೇಳಾರು

ಉಡುಪಿ, ಮಾ.16: ತುಳುನಾಡಿನಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ತುಳುನಾಡ ಸಿರಿ ಅಥವಾ ಉಳ್ಳಾಲದ ರಾಣಿ ಅಬ್ಬಕ್ಕ ರಾಜ್ಯ ಕಟ್ಟುವಲ್ಲಿ, ಬೆಳೆಸುವಲ್ಲಿ ಹೋರಾಟದ ಮಂಚೂಣಿಯಲ್ಲಿದ್ದವರು. ಮಹಿಳೆ ಮನಸ್ಸು ಮಾಡಿದರೆ ಒಂದು ರಾಜ್ಯವನ್ನು ಉಳಿಸಲೂಬಹುದು, ಉರುಳಿಸಲೂ ಬಹುದು ಎಂದು ಎರ್ಮಾಳ್ ಬಡಾ ಕಾಲೇಜಿನ ಪ್ರಾಂಶು ಪಾಲೆ ಜ್ಯೋತಿ ಚೇಳಾರು ಹೇಳಿದ್ದಾರೆ.
ಕಟಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಉಡುಪಿ ಸಿರಿತುಳುವ ಚಾವಡಿಯ 87ನೆ ಮುಂದಿಲ್ದ ಕೂಟ ಕಾರ್ಯಕ್ರಮ ದಲ್ಲಿ ತುಳುನಾಡ ಪೊನ್ನು-ಪೊಂಜೊವು ಎಂಬ ವಿಷಯದ ಕುರಿತು ಅವರು ವಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಕಟಪಾಡಿ ಗ್ರಾಪಂ ಅಧ್ಯಕ್ಷೆ ಜ್ಯೂಲಿಯನ್ ವೀರಾ ಡಿಸೋಜಾ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು. ಸಿರಿತುಳುವ ಚಾವಡಿಯ ಗೌರವಾಧ್ಯಕ್ಷ ಡಾ.ವೈ.ಎನ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೀಣಾ ಶೆಟ್ಟಿ, ಶೈಲಾ ಜೆ.ಶೆಟ್ಟಿ, ಪವಿತ್ರಾ ಶೆಟ್ಟಿ, ಪ್ರತಿಮಾ ಉಪಸ್ಥಿತರಿದ್ದರು.
ಪ್ರಭಾ ಬಿ.ಶೆಟ್ಟಿ ಸ್ವಾಗತಿಸಿದರು. ನಿಟ್ಟೂರು ಮಹಾಬಲ ಶೆಟ್ಟಿ ವಂದಿಸಿದರು. ಈಶ್ವರ ಶೆಟ್ಟಿ ಚಿಟ್ಪಾಡಿ ಕಾರ್ಯಕ್ರಮ ನಿರೂಪಿಸಿದರು.





