ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲದ ಸರಕಾರ: ಸಿಪಿಐಎಂ
ಬೈಂದೂರು, ಮಾ.16: ಮೋದಿ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವದನ್ನು ಸಿಪಿಐಎಂ ಬೈಂದೂರು ವಲಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ತೀವ್ರವಾಗಿ ಬೀಳುತ್ತಿರುವಾಗ, ನರೇಂದ್ರ ಮೋದಿ ಸರಕಾರ ತನ್ನ ಸ್ವಭಾವಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಏರಿಸಿದೆ. ಇದು ಆಗಲೇ ಆರ್ಥಿಕ ಹಿಂಜರಿತದ ಅಡಿಯಲ್ಲಿ ನರಳುತ್ತಿರುವ ಜನಗಳ ಮೆಲೆ ಒಂದು ಕ್ರಿಮಿನಲ್ ಏಟು ಎಂದು ಸಿಪಿಎಂ ಟೀಕಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳ ಈ ಕ್ರಿಮಿನಲ್ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು. ಚಿಲ್ಲರೆ ದರಗಳನ್ನು ಅಂತಾರಾಷ್ಟ್ರೀಯ ಬೆಲೆಗಳಲ್ಲಿ ಇಳಿಕೆಯ ಮಟ್ಟಕ್ಕೆ, ಅಂದರೆ 30ಶೇ.ರಷ್ಟು ಇಳಿಸಬೇಕು ಎಂದು ಸಿಪಿಐ(ಎಂ) ಬೈಂದೂರು ವಲಯ ಸಮಿತಿ ಒತ್ತಾಯಿಸಿದೆ.
Next Story





