ಕಾಸರಗೋಡು : ಯುವಕನಲ್ಲಿ ಕೊರೋನ ವೈರಸ್ ದೃಢ

ಕಾಸರಗೋಡು : ಕಾಸರಗೋಡಿನ ಯವಕನೋರ್ವನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡಕ್ಕೇರಿದೆ. ಇಂದು ಬಂದ ಮೂರು ಪಾಸಿಟಿವ್ ಪ್ರಕರಣಗಳಲ್ಲಿ ಒಂದು ಕಾಸರಗೋಡು ಜಿಲ್ಲೆಯದ್ದಾಗಿದ್ದು , ಇನ್ನಿಬ್ಬರು ಮಲಪ್ಪುರಂ ಜಿಲ್ಲೆಯವರಾಗಿದ್ದಾರೆ.
ದುಬೈ ನಿಂದ ಬಂದಿದ್ದ ಕಾಸರಗೋಡಿನ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಮೂವರು ವಿದೇಶದಿಂದ ಬಂದವರಾಗಿದ್ದಾರೆ.
ಈ ಹಿಂದೆ ಚೀನಾದಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಕಂಡು ಬಂದಿತ್ತು. ಇದುವರೆಗೆ ಕೇರಳದಲ್ಲಿ 24 ಮಂದಿಯಲ್ಲಿ ಸೋಂಕು ತಗಲಿದೆ. 12,740 ಮಂದಿಯ ನಿಗಾ ಇರಿಸಲಾಗಿದೆ.
ಕೊರೋನಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ 325 ಮಂದಿಗೆ ನಿಗಾ ಇರಿಸಲಾಗಿದ್ದು ಈ ಪೈಕಿ ನಾಲ್ಕು ಮಂದಿಯನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿದ್ದಾರೆ.
Next Story





