ಮದ್ರಸ ಶಿಕ್ಷಣ ಬಲಪಡಿಸುವುದು ಅನಿವಾರ್ಯ: ಅಬ್ದುರ್ರಹ್ಮಾನ್ ಮದನಿ

ಕಾಪು, ಮಾ.16: ಸಮಾಜದಲ್ಲಿರುವ ಅರಾಜಕತೆಯ, ಅಶಿಸ್ತುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ಶಾಂತಿ ನಿರ್ಮಿಸಲು ಮದ್ರಸ ಶಿಕ್ಷಣವನ್ನು ಬಲ ಪಡಿಸುವ ಅನಿವಾರ್ಯತೆ ಎದುರಾಗಿದೆ ಎಂದು ಸುನ್ನೀ ಮೇನೇಜ್ಮೆಂಟ್ ಅಸೋಸಿಯೇಶನ್ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಪ್ಪುಎನ್.ಎ. ಅಬ್ದುರ್ರಹ್ಮಾನ್ ಮದನಿ ಹೇಳಿದ್ದಾರೆ.
ಸುನ್ನೀ ಮೇನೇಜ್ಮೆಂಟ್ ಅಸೋಸಿಯೇಶನ್ ವತಿಯಿಂದ ಮಜೂರು ಸಿರಾಜುಲ್ ಹುದಾ ಮದ್ರಸದಲ್ಲಿ ಅಲೆರ್ಟ್-2020 ಪ್ರಯುಕ್ತ ಮಾ.14ರಂದು ಆಯೋಜಿಸಲಾದ ಸೆಯಲ್ಲಿ ಅವರು ಮಾತನಾಡುತಿದ್ದರು.
ಸಮಾಜದ ಸಬಲೀಕರಣಕ್ಕೆ ಉಲಮಾಗಳು, ನೇತಾರರು ಪರಸ್ಪರ ಕೈ ಜೋಡಿಸಬೇಕಾಗಿದೆ. ನಮ್ಮ ಸಮಾಜದಲ್ಲಿರುವ ಆಗುಹೋಗುಗಳನ್ನು ಅವಲೋಕಿಸಿ, ನಮ್ಮ ಸಮಾಜವನ್ನು ಉತ್ತಮ ಹಾದಿಗೆ ತಲುಪಿಸುವುು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಅಸೋಸಿಯೇಶನ್ ಅಧ್ಯಕ್ಷ ಇಕ್ಬಾಲ್ ಪಕೀರ್ಣಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಎಂ.ಕೆ.ಅಬ್ದುರ್ರಶೀದ್ ಸಖಾಫಿ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷ ಕತ್ತಾರ್ ಬಾವ ಹಾಜಿ, ಎಸ್.ಜೆ.ಎಂ. ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ, ಮಜೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿವ್ು ಐಡಿಯಲ್ ಶುಭಾಶಂಸನೆಗೈದರು.
ಪ್ರಧಾನ ಕಾರ್ಯದರ್ಶಿ ಮುಹ್ಯಿದ್ದೀನ್ ಸಖಾಫಿ ಪಯ್ಯಿರು ಸ್ವಾಗತಿಸಿದರು. ಕಾರ್ಯದರ್ಶಿ ಸಿದ್ದೀಕ್ ಸಅದಿ ಕಾರ್ಯಕ್ರಮ ನಿರೂಪಿಸಿದರು.





