ಶಂಕಿತ ಕೊರೋನ ಸೋಂಕು: ಕೆಎಂಸಿಗೆ ಗರ್ಭಿಣಿ ದಾಖಲು
ಉಡುಪಿ, ಮಾ.16: ಶಂಕಿತ ಕೊರೋನ ವೈರಸ್ (ಕೋವಿಡ್-19) ಸೋಂಕಿಗಾಗಿ 26ರ ಹರೆಯದ ಗರ್ಭಿಣಿ ಮಹಿಳೆಯೊಬ್ಬರು ಇಂದು ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಪ್ರತ್ಯೇಕಿತ ವಾರ್ಡಿಗೆ ದಾಖಲಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ಮಹಿಳೆ ಮಾ.13ರಂದು ದುಬೈಯಿಂದ ಊರಿಗೆ ಬಂದಿದ್ದು, ನಿನ್ನೆ ಸಂಜೆ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಸಂಜೆ ಪರೀಕ್ಷೆಗಾಗಿ ಕೆಎಂಸಿಗೆ ದಾಖಲಾಗಿದ್ದಾರೆ. ಅವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾ ಗಿದ್ದು, ನಾಳೆ ಸಂಜೆಯೊಳಗೆ ವರದಿ ಕೈಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗ ಶಂಕಿತ ಕೊರೋನ ಸೋಂಕಿಗಾಗಿ ಆಸ್ಪತ್ರೆಯಲ್ಲಿರುವ ಏಕೈಕ ರೋಗಿ ಇವರಾಗಿದ್ದಾರೆ. ಉಳಿದಂತೆ ಜಿಲ್ಲಾಸ್ಪತ್ರೆ ಯಲ್ಲಿದ್ದ ಯುವಕರು ಸೇರಿದಂತೆ ಎಲ್ಲರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದರು.
Next Story





