ಕೊಡಗಿನ ರಾಜು ಜೀವರಕ್ಷಿಸಿದ ಫಾತಿಮಾ

ಲೀಲಾ-ಫಾತಿಮಾ
ಮಂಗಳೂರು, ಮಾ.16: ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಕೊಡಗು ಮೂಲದ ಯುವಕನನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಹಿಳೆಯೊಬ್ಬರು ಕೋಮು ಸೌಹಾರ್ದತೆ ಮೆರೆಯುವ ಜತೆಗೆ ಮಾನವೀಯ ಸಂದೇಶ ರವಾನಿಸಿದ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿ ಗ್ರಾಮದ ಲೀಲಾ ಎಂಬವರ ಪುತ್ರ ರಾಜು (35) ಎರಡು ಮೂತ್ರಪಿಂಡಗಳ ಸಮಸ್ಯೆಯಿಂದ ಬಳಲುತ್ತಿದ್ದರು. ರಾಜು ರವಿವಾರ ಅಸ್ವಸ್ತಗೊಂಡಿದ್ದರು. ಈ ವೇಳೆ ಸಂತ್ರಸ್ತ ಕುಟುಂವಕ್ಕೆ ಆಸರೆಯಾದವರೇ ಈ ಸ್ವಗ್ರಾಮದ ಫಾತಿಮಾ.
ಮೊದಲು ರೋಗಿಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿ ಕೊಂಡಿತು. ರೋಗಿಯನ್ನು ಅಲ್ಲಿಂದ ಕರೆತಂದ ಫಾತಿಮಾ ನೇರವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಲೀಲಾಗೆ ರಾಜು ಒಬ್ಬನೇ ಮಗ. ಆಪದ್ಬಾಂಧವಿ ಫಾತಿಮಾ ಈ ಹಿಂದೆಯೂ ಲೀಲಾ ಅವರಿಗೆ ಅನೇಕ ಬಾರಿ ಸಹಾಯ ಮಾಡಿ ದ್ದಾರೆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಫಾತಿಮಾ ಅವರಿಗೆ ಎಐಕೆಎಂಸಿಸಿ ಕಾರ್ಯಕರ್ತರು ಸಹಕರಿಸಿದ್ದರು.







