ಮಣಿಪಾಲದ ಸಹಾಯಕ ಪ್ರೊಫೆಸರ್‌ಗೆ ಲಕ್ಷಾಂತರ ರೂ. ವಂಚನೆ

ಉಡುಪಿ, ಮಾ.16: ಮಣಿಪಾಲದ ಸಹಾಯಕ ಪ್ರೊಪೆಸರೊಬ್ಬರಿಗೆ ಲಂಡನ್‌ನ ಅರ್ಥೋಪೆಡಿಕ್ ಸರ್ಜನ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಮಾಹೆಯ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್‌ನಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಪಂಜಾಬ್ ಮೂಲದ ಹರ್‌ಪ್ರೀತ್ ಕೌರ್(32) ಎಂಬವರಿಗೆ ಸುಮಾರು ಎರಡು ತಿಂಗಳ ಹಿಂದೆ ಇನ್‌ಸ್ಟಗ್ರಾಂ ಮೂಲಕ ಗ್ರೆಗೋರಿ ಹಂಝಾ ಎಂಬಾತನ ಪರಿಚಯ ಆಗಿದ್ದು, ಆತ ತಾನು ಲಂಡನ್‌ನಲ್ಲಿ ಅರ್ಥೋಪೆಡಿಕ್ ಸರ್ಜನ್ ಎಂಬುವುದಾಗಿ ಇವರನ್ನು ನಂಬಿಸಿದ್ದನು.
ಕೌರ್‌ನನ್ನು ಭೇಟಿ ಮಾಡಲು ಭಾರತಕ್ಕೆ ಬರುವುದಾಗಿ ಆತ ಹೇಳಿದ್ದನು. ಮಾ.11ರಂದು ಅಪರಿಚಿತ ಮಹಿಳೆಯೊಬ್ಬಳು ಕೌರ್‌ಗೆ ಕರೆ ಮಾಡಿ ಗ್ರೆಗೋರಿ ಹಂಝಾ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಚೆಕಿಂಗ್‌ಗೆ ಒಳಪಟ್ಟಿದ್ದು, ಅದರ ಕ್ಲಿಯರ್‌ಗಾಗಿ ಹಣವನ್ನು ಹಾಕುವಂತೆ ತಿಳಿಸಿದ್ದಳು. ಅದರಂತೆ ಕೌರ್ ತನ್ನ ಖಾತೆಯಿಂದ ಒಟ್ಟು 3,40,500ರೂ. ಹಣ ವರ್ಗಾವಣೆ ಮಾಡಿ ಮೋಸಕ್ಕೆ ಒಳಗಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.





