ಪಾನ್-ಆಧಾರ್ ಜೋಡಣೆ: ಮಾರ್ಚ್ 31 ಅಂತಿಮ ಗಡುವು

ಹೊಸದಿಲ್ಲಿ, ಮಾ. 16: ಪಾನ್-ಆಧಾರ್ ಜೋಡಣೆ ಕಡ್ಡಾಯ ಎಂದು ಸೋಮವಾರ ಹೇಳಿರುವ ಆದಾಯ ತೆರಿಗೆ ಇಲಾಖೆ, ಅಂತಿಮ ಗಡುವಾದ ಮಾರ್ಚ್ 31ನ್ನು ತಪ್ಪಿಸಿಕೊಳ್ಳಬೇಡಿ ಎಂದಿದೆ.
“ಅಂತಿಮ ಗಡುವನ್ನು ತಪ್ಪಿಸಿಕೊಳ್ಳಬೇಡಿ. ನೀವು ಇದನ್ನು ಬಯೋಮೆಟ್ರಿಕ್ ಆಧಾರ್ ದೃಢಪಡಿಸುವ ಮೂಲಕ ಹಾಗೂ ಎನ್‌ಎಸ್‌ಡಿಎಲ್, ಯುಟಿಐಟಿಎಸ್‌ಎಲ್‌ನ ಪಾನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಮಾಡಬಹುದು” ಎಂದು ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಇತ್ತೀಚೆಗಿನ ಪೋಸ್ಟ್‌ನಲ್ಲಿ ಹೇಳಿದೆ.
ಇನ್‌ಕಮ್ ಟ್ಯಾಕ್ಸ್ ಇಂಡಿಯಾ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಸಂದೇಶದೊಂದಿಗೆ ವೀಡಿಯೊವೊಂದನ್ನು ಹಾಕಿರುವ ಇಲಾಖೆ, ಈ ಜೋಡಣೆ ನಾಳೆಗೆ ಉಪಯೋಗಕಾರಿ ಎಂದಿದೆ. ಪಾನ್-ಆಧಾರ್ ಜೋಡಣೆಗೆ ಎರಡು ದಾರಿಯನ್ನು ವೀಡಿಯೊ ವಿವರಿಸಿದೆ.
-567678 ಅಥವಾ 56161ಗೆ ಈ ಮಾದರಿಯಲ್ಲಿ ನೀವು ಎಸ್‌ಎಂಎಸ್ ರವಾನಿಸಬಹುದು: UIDPAN12digit Aadhaar>10digitPAN>
-ಆದಾಯ ತೆರಿಗೆ ಇಲಾಖೆಯ ಇ-ಪೈಲಿಂಗ್ ಪೋರ್ಟಲ್‌ನ : www.incometaxindiaefiling.gov.in
Next Story





