ಸಿಎಎ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲೇರಿದ ರಾಜಸ್ಥಾನ

ಹೊಸದಿಲ್ಲಿ,ಮಾ.16: ಪೌರತ್ವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ಆಡಳಿತ ರಾಜಸ್ಥಾನ ಸರಕಾರವು ಸೋಮವಾರ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದೆ.
ಸಮಾನತೆ ಹಾಗೂ ಬದುಕುವ ಹಕ್ಕಿನಂತಹ ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳನ್ನು ಸಿಎಎ ಉಲ್ಲಂಘಿಸುತ್ತದೆ ಎಂದು ಅದು ಹೇಳಿದೆ.
ಕೇಂದ್ರದೊಂದಿಗೆ ವಿವಾದ ತಲೆದೋರಿದಲ್ಲಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಲು ರಾಜ್ಯಗಳಿಗೆ ಸಂವಿಧಾನದ 131ನೇ ವಿಧಿಯಡಿ ಅವಕಾಶವಿದೆ. ಈ ಅಧಿಕಾರವನ್ನು ಬಳಸಿಕೊಂಡು ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ ಎರಡನೆ ರಾಜ್ಯ ರಾಜಸ್ಥಾನವಾಗಿದೆ.
ಈ ಮೊದಲು ಸಿಎಎ ಕಾಯ್ದೆಯನ್ನು ಪ್ರಶ್ನಿಸಿ ಕೇರಳ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಸಿಎಎ ಭಾರತದ ಸಂವಿಧಾನದ ನಿಯಮಗಳಿಗೆ ವಿರುದ್ಧವಾದುದಾಗಿದೆ ಹಾಗೂ ಅದನ್ನು ಅಸಿಂಧುವೆಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
Next Story





