ಕೊರೋನ ಸೋಂಕಿನ ಬಗ್ಗೆ ಜಾಗೃತಿ: ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಮಾಸ್ಕ್ ವಿತರಣೆ

ಮಂಗಳೂರು, ಮಾ.17: ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಲೇಡಿಗೋಶನ್ ಘಟಕದಿಂದ ಮಾರಕ ರೋಗ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ನಗರದ ಲೇಡಿಗೋಶನ್ ಸಮೀಪ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ನಗರದಲ್ಲಿ ಸಾರ್ವಜನಿಕರಿಗೆ 500 ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಕೊರೋನ ಸೋಂಕು ಹರಡದಂತೆ ಈ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ಟೇಟ್‌ಬ್ಯಾಂಕ್, ಮೈದಾನ ರಸ್ತೆ, ಹಂಪನಕಟ್ಟೆ, ಸೆಂಟ್ರಲ್ ಮಾರ್ಕೆಟ್, ಕಂಕನಾಡಿ, ಕೆಎಸ್ಸಾರ್ಟಿಸಿ ಘಟಕಗಳಿಂದಲೂ ಮಾಸ್ಕ್‌ಗಳನ್ನು ವಿತರಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಈ ಸಂದರ್ಭ ಸಂಘದ ಲೇಡಿಗೋಶನ್ ಘಟಕದ ಅಧ್ಯಕ್ಷ ಸಂತೋಷ್ ಆರ್.ಎಸ್., ಕಾರ್ಯದರ್ಶಿಗಳಾದ ಶೌಕತ್, ಪ್ರ.ಕಾ. ಹರೀಶ್ ಪೂಜಾರಿ, ಖಜಾಂಚಿ ಆಸಿಫ್ ಮತ್ತಿತರರು ಇದ್ದರು.

Next Story





