ಜಮಾತ್ ಸದಸ್ಯತ್ವ ನೊಂದಣಿ
ಉಡುಪಿ, ಮಾ.17: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಆದೇಶದಂತೆ ಉಡುಪಿ ಜಿಲ್ಲೆಯ ಬೈಂದೂರು ಜಾಮೀಯ ಮಸೀದಿಗೆ ಜಮಾತ್ ಸದಸ್ಯತ್ವ ನೊಂದಣಿಗೆ ಅರ್ಜಿ ನೀಡುವ ಪ್ರಕ್ರಿಯೆಯು ಮಾ.7ರಿಂದ ಆರಂಭಗೊಂಡಿದೆ.
ಫೆ.26ರಂದು ಪ್ರಕಟಿಸಿದ ಅಧಿಸೂಚನೆಯಂತೆ ಷರತ್ತುಗಳನ್ನೊಂಡು ಭರ್ತಿ ಮಾಡಿದ ಫಾರಂಗಳನ್ನು ಮಸೀದಿಯ ಕಚೇರಿಯಲ್ಲಿ ಸಲ್ಲಿಸಲು ಮಾ.30ರಂದು ಕೊನೆಯ ದಿನವಾಗಿದೆ. ಅದರಂತೆ ಈಗಾಗಲೇ ನೊಂದಾಣಿಯಾಗದೆ ಇರುವ ಜಮಾತ್ ಸದಸ್ಯರು ಅರ್ಜಿ ಪಡೆದು ನಿಗದಿತ ದಿನಾಂಕದ ಒಳಗೆ ಸಲ್ಲಿಸಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





