ಮಸೀದಿಗಳಲ್ಲಿ ನಮಾಝ್ ಶೀಘ್ರವೇ ಮುಗಿಸಿ: ಖಾಝಿ
ಉಡುಪಿ, ಮಾ.17: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಹೆಚ್ಚು ಜನರು ಸೇರುವ ಸಮಾರಂಭಗಳನ್ನು ಸದ್ಯಕ್ಕೆ ಕೈಬಿಡಬೇಕು ಹಾಗೂ ಮಸೀದಿಗಳಲ್ಲಿ ನಡೆಸುವ ನಮಾಝ್ ಶೀಘ್ರದಲ್ಲೇ ಮುಗಿಸಬೇಕು. ಸಾರ್ವಜನಿಕರು ಮಸೀದಿಗಳಲ್ಲಿ ಟ್ಯಾಂಕ್ ನೀರಿನ ಬದಲು ನಳ್ಳಿ ನೀರನ್ನು ಬಳಸಿ ಮುಂಜಾಗ್ರತೆ ವಹಿಸಬೇಕು ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಹೇಳಿರುವುದಾಗಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





