ಕೊರೋನ ಜಾಗೃತಿ ಕರಪತ್ರ ವಿತರಣೆಗೆ ಚಾಲನೆ

ಉಡುಪಿ, ಮಾ.17: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿ ಯೇಶನ್ ಉಡುಪಿ ವಲಯದ ವತಿಯಿಂದ ಕೊರೊನ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರ ವಿತರಣಾ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಂಗಳವಾರ ಚಾಲನೆ ನೀಡಿದರು.
ಈ ಪ್ರಯುಕ್ತ ನಗರದಾದ್ಯಂತ ಸುಮಾರು 5000 ಮುದ್ರಿತ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಉಡುಪಿ ವಲಯ ಅಧ್ಯಕ್ಷ ಪ್ರಕಾಶ್ ಕೊಡಂಕೂರು, ಕಾರ್ಯದರ್ಶಿ ಸುಖೇಶ್ ಅಮೀನ್, ಗೌರವಾಧ್ಯಕ್ಷ ಶಿವ ಕೆ. ಅಮೀನ್, ಜಿಲ್ಲಾ ಸಂಘಟನೆಯ ಸಲಹಾ ಸಮಿತಿ ಸದಸ್ಯ ಜಯಕರ ಸುವರ್ಣ, ಜಿಲ್ಲಾ ಮಾಧ್ಯಮ ವಕ್ತಾರ ಜನಾರ್ದನ್ ಕೊಡವೂರು, ವಲಯ ಸದಸ್ಯರಾದ ಮಹೇಶ್ ಸುವರ್ಣ, ಸಬೆಸ್ಟಿನ್ ಅಂಚನ್, ಸತೀಶ್ ಸೇರಿಗಾರ್ ಮೊದಲಾದ ವರು ಉಪಸ್ಥಿತರಿದ್ದರು.
Next Story





