ಕಾಪು, ಮಾ.17: ಮೂಡಬೆಟ್ಟು ಗ್ರಾಮದ ಲತಾ ವೈನ್ಸ್ ಹತ್ತಿರ ಮಾ.16 ರಂದು ಸಂಜೆ ವೇಳೆ ಮಟ್ಕಾ ಜುಗಾರಿ ನಡೆಸುತ್ತಿದ್ದ ಹನುಮಂತ ನಗರದ ರಾಕೇಶ(26) ಹಾಗೂ ಕುರ್ಕಾಲು ಸುಭಾಸ್‌ನಗರದ ದಯಾನಂದ (56) ಎಂಬವರನ್ನು ಕಾಪು ಪೊಲೀಸರು ಬಂಧಿಸಿ, 7,560ರೂ. ನಗದು ವಶಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.