ನಗರಸಭೆ: ತೆರಿಗೆ ಪಾವತಿಗೆ ಸೂಚನೆ
ಉಡುಪಿ, ಮಾ.17: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 2002 ಮಾ.1 ರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದ್ದು, ಕರ್ನಾಟಕ ಪುರಸಭಾ ಕಾಯ್ದೆ 1964ರ ನಿಯಮ 102ಎರಂತೆ ಕರ್ನಾಟಕ ಸ್ಟಾಂಪ್ ಕಾಯ್ದೆ 1957ರ ಸೆಕ್ಷನ್ 45ಬಿರನ್ವಯ ಮಾರುಕಟ್ಟೆ ಮೌಲ್ಯದ ಶೇ.50ರ ಮೇಲೆ , ಜಾಗ ಮತ್ತು ಕಟ್ಟಡ ವೌಲ್ಯದ ಮೇಲೆ ವಾಸ್ತವ್ಯ / ವಾಣಿಜ್ಯ ಉದ್ದೇಶಕ್ಕನುಗುಣವಾಗಿ ಲೆಕ್ಕಾಚಾರ ಮಾಡಿ, ಕಟ್ಟಡ ನಿರ್ಮಿಸಿದ ವರ್ಷದ ಆಧಾರದಲ್ಲಿ ಸವಕಳಿ ಕಳೆದು 2005-06ನೇ ಸಾಲಿನಿಂದ ಪ್ರತೀ 3 ವರ್ಷದ ಬ್ಲಾಕ್ ಅವಧಿ ವರ್ಷಗಳಿಗೊಮ್ಮೆ ಶೇ.15 ತೆರಿಗೆ ಹೆಚ್ಚಳ ಮಾಡಿ ವಸೂಲಿ ಮಾಡಲಾಗುತ್ತಿದೆ.
ಇದರಂತೆ 2020-21ನೇ ಸಾಲಿನ ತೆರಿಗೆಯ ಮೇಲೆ ಮುಂದಿನ 3 ವರ್ಷಗಳ ಅವಧಿಗೆ ಶೇ.15 ಹೆಚ್ಚಳವಾಗಿರುತ್ತದೆ. ತೆರಿಗೆ ಪಾವತಿದಾರರು 2020-21ನೇ ಸಾಲಿಗೆ ಶೇ.15 ಹೆಚ್ಚಳದೊಂದಿಗೆ ತೆರಿಗೆ ಪಾವತಿ ಮಾಡ ಬೇಕಾಗಿದೆ ಹಾಗೂ 2020-21ನೇ ಸಾಲಿನ ತೆರಿಗೆಯನ್ನು 2021ರ ಎ.30ರ ಒಳಗೆ ಪಾವತಿ ಮಾಡಿದ್ದಲ್ಲಿ ಶೇ.5ರಷ್ಟು ರಿಯಾಯಿತಿ ಇರುತ್ತದೆ.
ತೆರಿಗೆ ಪಾವತಿದಾರರು ಈ ರಿಯಾಯಿತಿಯ ಸದುಪಯೋಗ ಪಡೆದು, ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸುವಂತೆ ನಗರಸೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.







