ಕೊರೋನ ವೈರಸ್: ಅಫ್ಘಾನಿಸ್ತಾನ, ಫಿಲಿಪ್ಪೀನ್ಸ್, ಮಲೇಶ್ಯಾ ಪ್ರಯಾಣಿಕರ ಭಾರತ ಪ್ರವೇಶಕ್ಕೆ ನಿಷೇಧ

ಹೊಸದಿಲ್ಲಿ, ಮಾ. 17: ಅಫ್ಘಾನಿಸ್ತಾನ, ಪಿಲಿಪ್ಪೈನ್ ಹಾಗೂ ಮಲೇಶ್ಯಾದ ಪ್ರಯಾಣಿಕರು ದೇಶ ಪ್ರವೇಶಿಸುವುದಕ್ಕೆ ಕೇಂದ್ರ ಸರಕಾರ ಮಂಗಳವಾರ ನಿಷೇಧ ಹೇರಿದೆ. ಮಾರ್ಚ್ 11ರಿಂದ ಮಾರ್ಚ್ 16ರ ವರೆಗೆ ನಿರಂತರ ಪ್ರಯಾಣ ಸಲಹೆಗಳನ್ನು ನೀಡಿರುವ ನಡುವೆ ಈ ಹೆಚ್ಚುವರಿ ಸಲಹೆಯನ್ನು ಕೇಂದ್ರ ಸರಕಾರ ನೀಡಿದೆ. ‘‘ಕೂಡಲೇ ಜಾರಿಗೆ ಬರುವಂತೆ ಅಫ್ಘಾನಿಸ್ತಾನ, ಪಿಲಿಪ್ಪೈನ್ ಹಾಗೂ ಮಲೇಶ್ಯಾದ ಪ್ರಯಾಣಿಕರು ಇಲ್ಲಿಗೆ ಆಗಮಿಸುವುದಕ್ಕೆ ನಿಷೇಧ ವಿಧಿಸಲಾಗಿದೆ’’ ಎಂದು ‘ಹೆಚ್ಚುವರಿ ಪ್ರಯಾಣ ಸಲಹೆ’ ತಿಳಿಸಿದೆ.
ಈ ಸೂಚನೆ ತಾತ್ಕಾಲಿಕ ಕ್ರಮ. ಆದರೆ, ಮಾರ್ಚ್ 31ರ ವರೆಗೆ ಚಾಲ್ತಿಯಲ್ಲಿ ಇರಲಿವೆ. ಅಲ್ಲದೆ, ಕಾಲಕ್ಕನುಗುಣವಾಗಿ ಪರಿಷ್ಕರಿಸಲಾಗುವುದು. ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಯುರೋಪ್ ಒಕ್ಕೂಟದ ದೇಶಗಳು, ಟರ್ಕಿ ಹಾಗೂ ಇಂಗ್ಲೆಂಡ್‌ನಿಂದ ಮಾರ್ಚ್ 18ರಿಂದ ಮಾರ್ಚ್ 31ರ ವರೆಗೆ ಪ್ರಯಾಣಿಕರು ದೇಶಕ್ಕೆ ಆಗಮಿಸದಂತೆ ಈಗಾಗಲೇ ನಿಷೇಧ ವಿಧಿಸಲಾಗಿದೆ.
Next Story





